500ಕ್ಕೂ ಅಧಿಕ ಭಾರತೀಯ ಕೈದಿಗಳಿಗೆ ಯುಇಎ ಕ್ಷಮಾದಾನ
Update: 2025-03-28 21:12 IST

ಸಾಂದರ್ಭಿಕ ಚಿತ್ರ | PC : freepik.com
ಅಬುಧಾಬಿ: ರಮಝಾನ್ ಪವಿತ್ರ ತಿಂಗಳಿನ ಹಿನ್ನೆಲೆಯಲ್ಲಿ ಯುಎಇ 500ಕ್ಕೂ ಅಧಿಕ ಭಾರತೀಯ ಕೈದಿಗಳ ಸಹಿತ 1,518 ಕೈದಿಗಳಿಗೆ ಕ್ಷಮಾದಾನ ಘೋಷಿಸಿದೆ.
1,295 ಕೈದಿಗಳನ್ನು ಬಿಡುಗಡೆಗೊಳಿಸಲು ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಆದೇಶಿಸಿದ್ದರೆ, ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ 1,518 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ.
ದುಬೈಯ `ನಡವಳಿಕೆ ಸುಧಾರಣೆ ಮತ್ತು ದಂಡನಾತ್ಮಕ' ವ್ಯವಸ್ಥೆಗಳಲ್ಲಿ ಇರಿಸಲಾಗಿರುವ ವಿವಿಧ ರಾಷ್ಟ್ರಗಳ ಪ್ರಜೆಗಳಿಗೆ ಈ ಕ್ಷಮಾದಾನ ಅನ್ವಯಿಸುತ್ತದೆ. ಬಿಡುಗಡೆಯಾದ ಕೈದಿಗಳ ಹಣಕಾಸಿನ ಬಾಧ್ಯತೆಗಳನ್ನು ಇತ್ಯರ್ಥಪಡಿಸುವುದಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ವಾಗ್ದಾನ ಮಾಡಿರುವುದಾಗಿ ದುಬೈಯ ಅಟಾರ್ನಿ ಜನರಲ್ ಹೇಳಿದ್ದಾರೆ.