ಒಮಾನ್ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ರವಿವಾರ (ಮಾ.30) ಈದ್ ಉಲ್ ಫಿತರ್ ಆಚರಣೆ
Update: 2025-03-29 20:50 IST

Photo:x/@insharifain
ರಿಯಾದ್: ಸೌದಿ ಅರೇಬಿಯದಲ್ಲಿ ಶನಿವಾರ ಸಂಜೆ ಶವ್ವಾಲ್ ಚಂದ್ರ ದರ್ಶನವಾದ ಕಾರಣ ರವಿವಾರ ಈದ್ ಉಲ್ ಫಿತರ್ ಆಚರಣೆ ಮಾಡಲಾಗುವುದು ಎಂದು ಸೌದಿ ಆರೇಬಿಯಾದ ಅಧಿಕೃತ ಸುದ್ದಿ ಸಂಸ್ಥೆ ಇನ್ ಸೈಡ್ ಹರಮೈನ್ ತಿಳಿಸಿದೆ.
ಗಲ್ಫ್ ರಾಷ್ಟ್ರವಾದ ಬಹರೈನ್, ಕುವೈತ್, ಯುಎಇ, ಖತರ್ ನಲ್ಲೂ ರವಿವಾರ ಈದ್ ನಡೆಯಲಿದೆ.
ಚಂದ್ರ ದರ್ಶನವಾಗದ ಕಾರಣ ಒಮಾನ್ ನಲ್ಲಿ ಸೋಮವಾರ ಈದ್ ನಡೆಯಲಿದೆ.