ಕಾವಳಕಟ್ಟೆ ಅಲ್-ಖಾದಿಸ: ಜುಬೈಲ್‍ನಲ್ಲಿ ಇಫ್ತಾರ್ ಮೀಟ್

ಜುಬೈಲ್: ಕಾವಳಕಟ್ಟೆ ಅಲ್-ಖಾದಿಸ ಇದರ ಜುಬೈಲ್ ಘಟಕದ ವತಿಯಿಂದ ಬೃಹತ್ ಇಫ್ತಾರ್ ಮೀಟ್ ಕಾರ್ಯಕ್ರಮವು ಇತ್ತೀಚೆಗೆ ಜುಬೈಲ್ ಅಲ್-ಫಲಾಹ್ ಮೈದಾನದಲ್ಲಿ ನಡೆಯಿತು.
ಅಲ್-ಖಾದಿಸ ಸಂಸ್ಥೆಯ ಮುಖ್ಯಸ್ಥ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ರಾಷ್ಟ್ರೀಯ ನಾಯಕ ಆಸಿಫ್ ಗೂಡಿನಬಳಿ ಉದ್ಘಾಟಿಸಿದರು. ಮಜ್ಲಿಸ್ ಗಾಣೆಮಾರ್ ಮುದರ್ರಿಸ್ ಸಯ್ಯಿದ್ ತ್ವಾಹ ತಂಙಳ್ ನಅತೇ ಶರೀಫ್ ಹಾಗೂ ದುಆ ನೆರವೇರಿಸಿದರು. ಉದ್ಯಮಿ ನಝೀರ್ ಪಡುಬಿದ್ರಿ ಅಲ್-ಖಾದಿಸ ಸಂಸ್ಥೆಯ ಉದ್ದೇಶಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಝಕರಿಯ್ಯಾ ಜೋಕಟ್ಟೆ, ಇಸ್ಮಾಯಿಲ್ ಪೂಕಾಕ, ಶಬೀರ್, ಇಮ್ರಾನ್ ಅಸ್ಕಾಫ್, ಡಿಕೆಎಸ್‍ಸಿ ಪ್ರಮುಖರಾದ ಹಾತಿಮ್ ಕೂಳೂರು, ಅಬ್ದುಲ್ ಹಮೀದ್ ಅರಮೆಕ್ಸ್, ಅಲ್ ಖಾದಿಸ ಜಬೈಲ್ ಘಟಕಾಧ್ಯಕ್ಷ ಶಹೀರ್ ಅಬ್ಬಾಸ್ ಮೊದಲಾದವರು ಭಾಗವಹಿಸಿದ್ದರು.
ಕೆಸಿಎಫ್ ಅಂತರಾಷ್ಟ್ರೀಯ ನಾಯಕ ಕಮರುದ್ದೀನ್ ಗೂಡಿನಬಳಿ ಸ್ವಾಗತಿಸಿ, ಸಿರಾಜ್ ಬಾರ್ಕೂರು ವಂದಿಸಿದರು. ಮುಹಮ್ಮದಿ ಝಹೀಮ್ ಕಿರಾಅತ್ ಪಠಿಸಿದರು. ಇಕ್ಬಾಲ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.
ಜುಬೈಲ್ ಪರಿಸರದ ಎಲ್ಲಾ ಸಂಘ-ಸಂಸ್ಥೆಗಳ ನಾಯಕರು ಹಾಗೂ ಕಾರ್ಯಕರ್ತರು ಸುಮಾರು 2000ಕ್ಕೂ ಅಧಿಕ ಮಂದಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.