ಕೆಸಿಎಫ್ ಬಹರೈನ್ ವತಿಯಿಂದ ನಡೆದ ಗ್ರಾಂಡ್ ಇಫ್ತಾರ್ ಪ್ರೌಢ ಸಮಾಪ್ತಿ

Update: 2025-03-25 11:50 IST
Photo of Program
  • whatsapp icon

ಬಹರೈನ್ : ಕೆಸಿಎಫ್ ಬಹರೈನ್ ವತಿಯಿಂದ ಹಮ್ಮಿಕೊಂಡ ಬೃಹತ್ ಇಫ್ತಾರ್ ಕೂಟವು ಮಾ.21ರಂದು ಮನಾಮ ಮೈದಾನದಲ್ಲಿ ನಡೆಯಿತು.

ಅಸ್ಸಯ್ಯಿದ್ ಅಲೀ ಬಾಫಕೀ ತಂಙಳ್ ಅವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ಅವರು ವಹಿಸಿದ್ದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತ ಭಾಷಣ ಮಾಡಿದರು.

ಈ ವೇಳೆ ಅಸ್ಸಯ್ಯಿದ್ ಅಬ್ದುದ್ ರಹ್ಮಾನ್ ಆಟಿರಿ ತಂಙಳ್ ಅವರು ಮಾತನಾಡಿ, ಪವಿತ್ರ ರಮಝಾನ್ ಪಾಪ ವಿಮೋಚನೆಯ ಮಾಸವಾಗಿದ್ದು, ಅಲ್ಲಾಹನೊಂದಿಗೆ ಪಶ್ಚಾತ್ತಾಪ ಪಟ್ಟು ನಾವು ತೌಬಾ ಮಾಡಬೇಕಾಗಿದೆ. ಅಲ್ಲಾಹನು ಅತ್ಯಂತ ಕ್ಷಮಾಶೀಲನಾಗಿದ್ದು, ಅವನ ಕ್ಷಮೆಯನ್ನು ಪಡೆದರೆ ಮಾತ್ರ ನಾವು ಪರಲೋಕ ವಿಜಯಿಯಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಫೆಲೆಸ್ತೀನ್ ರಾಯಭಾರಿ ತ್ವಾಹ ಎಂ.ಅಬ್ದುಲ್ ಖಾದರ್ ಆಗಮಿಸಿದ್ದರು.

ವೇದಿಕೆಯಲ್ಲಿ ಸ್ಟಾರ್ಸ್ ಸರ್ವಿಸ್ ಕಂಪನಿ ದಮ್ಮಾಮ್ ಕೆ.ಎಸ್.ಎ ಇದರ ಸಿಇಓ ಅಬೂಬಕ್ಕರ್ ನವಾಝ್, ಬಹರೈನ್ ಉದ್ಯಮಿ ಸಾರಾ ಗ್ರೂಪ್ ಸಿಇಓ ಮುಹಮ್ಮದ್ ಮನ್ಸೂರ್ ಹೆಜಮಾಡಿ, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಅಧ್ಯಕ್ಷ ರಾಜ್ ಕುಮಾರ್, ಬಹರೈನ್ ಜರ್ನಲಿಸ್ಟ್ ರಾಮಿ ರಶೀದ್, ಡಿ.ಕೆ.ಎಸ್.ಸಿ ಬಹರೈನ್ ಅಧ್ಯಕ್ಷಅಬ್ದುಲ್ ಮಜೀದ್ ಸಅದಿ, ಕುಂಬ್ರ ಮರ್ಕಝುಲ್ ಹುದಾ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೆಸಿಎಫ್ ಅಂತರ್ ರಾಷ್ಟ್ರೀಯ ಸಮಿತಿ ಯೋಜನಾ ಸಮಿತಿ ಡೈರೆಕ್ಟರ್ ಅಲಿ ಮುಸ್ಲಿಯಾರ್ ಕೊಡಗು, ಐಸಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಕಲಂದರ್ ಮುಸ್ಲಿಯಾರ್ ಕಕ್ಕೆಪದವು, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಆಝ್ ಉಜಿರೆ, ಗ್ರಾಂಡ್ ಇಫ್ತಾರ್ ಚೇರ್ಮನ್‌ ಇಕ್ಬಾಲ್ ಮಂಜನಾಡಿ, ಕನ್ವೀನರ್ ಲತೀಫ್ ಪೇರೋಲಿ, ಫೈನಾನ್ಸ್ ಕಂಟ್ರೋಲರ್ ಸೂಫಿ ಪೈಂಬಚಾಲ್, ಕೆಸಿಎಫ್ ಬಹರೈನ್ ಸಂಘಟನಾ ವಿಭಾಗದ ಅಧ್ಯಕ್ಷ ಮನ್ಸೂರ್ ಬೆಲ್ಮ, ಎಜುಕೇಶನ್ ಅದ್ಯಕ್ಷರಾದ ಸುಹೈಲ್ ಬಿ.ಸಿ.ರೋಡ್, ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ಇಹ್ಸಾನ್ ಅಧ್ಯಕ್ಷ ನಝೀರ್ ಹಾಜಿ ದೇರಳಕಟ್ಟೆ, ಸಾಂತ್ವನ ಅಧ್ಯಕ್ಷ ರಝಾಕ್ ಆನೇಕಲ್, ಕಾರ್ಯದರ್ಶಿ ಅಶ್ರಫ್ ಕಿನ್ಯ, ಪ್ರಕಾಶನ ವಿಭಾಗದ ಅಧ್ಯಕ್ಷ ಫಝಲ್ ಸುರತ್ಕಲ್, ಕಾರ್ಯದರ್ಶಿ ಶಾಫಿ ಮಾದಾಪುರ, ಆಡಳಿತ ವಿಭಾಗದ ಅಧ್ಯಕ್ಷ ಮೂಸಾ ಪೈಂಬಚಾಲ್, ಕಾರ್ಯದರ್ಶಿ ಸಿದ್ದೀಕ್ ಎನ್ಮೂರ್, ಪ್ರೊಫೆಶನಲ್ ವಿಭಾಗದ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ, ಕೆಸಿಎಫ್ ಕತಾರ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಆಶ್ರಫಿ ಹಾಗೂ ವಿವಿಧ ಸಂಘಟನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಬೃಹತ್ ಬದ್ರ್ ಮೌಲಿದ್ ಮಜ್ಲಿಸ್ ನಡೆಯಿತು. ಇಫ್ತಾರ್ ಸಂಗಮದಲ್ಲಿ ಬಹರೈನಿನ ವಿವಿಧ ಕಡೆಗಳಿಂದ ನೂರಾರು ಮಂದಿ ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News