ತೆಲುಗು ಸಿನೇಮಾದಲ್ಲಿ ಅಭಿನಯಿಸಿದ ಡೇವಿಡ್ ವಾರ್ನರ್

Update: 2025-03-15 21:29 IST
David Warner

ಡೇವಿಡ್ ವಾರ್ನರ್ | PC : X  \ @davidwarner31

  • whatsapp icon

ಹೈದರಾಬಾದ್: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಡೇವಿಡ್ ವಾರ್ನರ್ ತೆಲುಗು ಸಿನೇಮಾದಲ್ಲಿ ಅಭಿನಯಿಸಿದ್ದಾರೆ. ಅವರು ನಿತಿನ್ ಮತ್ತು ಶ್ರೀಲೀಲಾ ಅಭಿನಯದ ‘ರಾಬಿನ್‌ಹುಡ್’ ಚಿತ್ರದಲ್ಲಿ ಕ್ರಿಪ್ರವಾಗಿ ಬಂದು ಹೋಗುವ (ಕ್ಯಾಮಿಯೊ) ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ಈ ಸುದ್ದಿಯನ್ನು ಅವರು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಚಿತ್ರದಲ್ಲಿ ತನ್ನ ಪಾತ್ರವನ್ನು ತೋರಿಸುವ ಪೋಸ್ಟರನ್ನು ಅವರು ಟ್ವಿಟರ್‌ನಲ್ಲಿ ಹಾಕಿದ್ದಾರೆ ಮತ್ತು ಚಿತ್ರವು ಮಾರ್ಚ್ 28ರಂದು ಬಿಡುಗಡೆಗೊಳ್ಳಲಿದೆ ಎಂದು ಹೇಳಿದ್ದಾರೆ.

ವಾರ್ನರ್ ಮೊದಲಿನಿಂದಲೂ ತೆಲುಗು ಸಿನೇಮಾದ ಅಭಿಮಾನಿಯಾಗಿದ್ದಾರೆ. ಹಲವು ವರ್ಷಗಳಿಂದ ತೆಲುಗು ಚಿತ್ರದ ಹಾಡುಗಳನ್ನು ಆಧರಿಸಿದ ಅವರ ರೀಲ್‌ಗಳು ಭಾರೀ ಪ್ರಸಿದ್ಧಿ ಪಡೆದಿವೆ. ಅವರು ಐಪಿಎಲ್‌ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದರು. 2016ರಲ್ಲಿ ಅವರ ನಾಯಕತ್ವದ ತಂಡವು ಪ್ರಶಸ್ತಿ ಗೆದ್ದಿತ್ತು.

ಒಲಿಂಪಿಕ್ಸ್‌ನಲ್ಲಿ ಆಡಲು ಕೊಹ್ಲಿ ಟಿ20 ನಿವೃತ್ತಿಯಿಂದ ಹೊರಬರುವರೇ? (ವಾ/ಫೇ)

ಮುಂಬೈ: ಅಂತರರಾಷ್ಟ್ರೀಯ ಟಿ20 ನಿವೃತ್ತಿಯಿಂದ ನಾನು ಹೊರಬರಬಹುದು, ಆದರೆ ಅಲ್ಲೊಂದು ಸಮಸ್ಯೆಯಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಲಘು ಧಾಟಿಯಲ್ಲಿ ಹೇಳಿದ್ದಾರೆ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಫೈನಲ್ ಬಳಿಕ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ ನಲ್ಲಿ ದಕ್ಷಿಣ ಆಫ್ರಿಕವನ್ನು ಸೋಲಿಸಿ ಭಾರತ ಪ್ರಶಸ್ತಿ ಎತ್ತಿತ್ತು.

2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನ ಪುರುಷರ ಕ್ರಿಕೆಟ್‌ನಲ್ಲಿ ಭಾರತ ಫೈನಲ್ ತಲುಪಿದರೆ, ಒಂದು ಪಂದ್ಯ ಆಡುವುದಕ್ಕಾಗಿ ತಾನು ನಿವೃತ್ತಿಯಿಂದ ಹೊರಬರಬಹುದು ಎಂಬುದಾಗಿ ಲಘು ಧಾಟಿಯಲ್ಲಿ ಕೊಹ್ಲಿ ಹೇಳಿದ್ದಾರೆ.

2028ರ ಒಲಿಂಪಿಕ್ಸ್‌ನಲ್ಲಿ, 128 ವರ್ಷಗಳ ಬಳಿಕ ಕ್ರಿಕೆಟ್ ಒಲಿಂಪಿಕ್ಸ್‌ಗೆ ಮರಳುತ್ತಿದೆ.

‘‘2028ರ ಒಲಿಂಪಿಕ್ಸ್‌ನ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾರತ ಫೈನಲ್ ತಲುಪಿದರೆ, ಆ ಒಂದು ಪಂದ್ಯದಲ್ಲಿ ಆಡುವುದಕ್ಕಾಗಿ ನಿವೃತ್ತಿಯಿಂದ ಹೊರಬರುವ ಬಗ್ಗೆ ನಾನು ಯೋಚಿಸಬಹುದು. ಒಲಿಂಪಿಕ್ ಪದಕವನ್ನು ಗೆಲ್ಲುವ ಸಂಭ್ರಮವೇ ಬೇರೆ’’ ಎಂದು ಇನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನ ನೇಪಥ್ಯದಲ್ಲಿ ಮಾತನಾಡಿದ ಕೊಹ್ಲಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News