ಗಾಝಾ ಯುದ್ಧ ಕೊನೆಗೊಳಿಸಿದರೆ ಒತ್ತೆಯಾಳುಗಳ ಬಿಡುಗಡೆ: ಹಮಾಸ್

Update: 2025-04-14 22:27 IST
ಗಾಝಾ ಯುದ್ಧ ಕೊನೆಗೊಳಿಸಿದರೆ ಒತ್ತೆಯಾಳುಗಳ ಬಿಡುಗಡೆ: ಹಮಾಸ್

PC: x.com/WIONews

  • whatsapp icon

ಕೈರೋ: ಗಾಝಾದಲ್ಲಿನ ಯುದ್ಧವನ್ನು ಇಸ್ರೇಲ್ ಕೊನೆಗೊಳಿಸುತ್ತದೆ ಮತ್ತು ಕೈದಿಗಳ ವಿನಿಮಯದ ಬಗ್ಗೆ ಖಾತರಿ ನೀಡಿದರೆ ಇಸ್ರೇಲ್ ನ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಸಿದ್ಧ ಎಂದು ಹಮಾಸ್ ನ ಉನ್ನತ ಅಧಿಕಾರಿ ಸೋಮವಾರ ಹೇಳಿದ್ದಾರೆ.

ಗಾಝಾದಲ್ಲಿ ಕದನ ವಿರಾಮ ಒಪ್ಪಂದದ ಬಗ್ಗೆ ಈಜಿಪ್ಟ್ ನ ಕೈರೋದಲ್ಲಿ ಅಮೆರಿಕ, ಈಜಿಪ್ಟ್ ಮತ್ತು ಖತರ್ ನ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಹಮಾಸ್ ನಿಯೋಗ ಪಾಲ್ಗೊಂಡಿದೆ. ಕೈದಿಗಳೊಂದಿಗೆ ಒತ್ತೆಯಾಳುಗಳ ವಿನಿಮಯ, ಗಾಝಾ ಪಟ್ಟಿಯಿಂದ ಇಸ್ರೇಲ್ ಪಡೆಗಳ ವಾಪಸಾತಿ, ಯುದ್ಧದ ಅಂತ್ಯ ಹಾಗೂ ಗಾಝಾಕ್ಕೆ ಮಾನವೀಯ ನೆರವು ಪ್ರವೇಶಕ್ಕೆ ಅವಕಾಶವಿದ್ದರೆ ನಾವು ಇಸ್ರೇಲ್ ನ ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧ' ಎಂದು ಹಮಾಸ್ ನ ವರಿಷ್ಠ ತಾಹೆರ್ ಅಲ್-ನುನು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News