ದಂಗೆ ನಡೆಸಿರುವುದನ್ನು ನಿರಾಕರಿಸಿದ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೆಯೋಲ್

File Photo - REUTERS
ಸಿಯೋಲ್: ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸಿದ ಕಾರಣಕ್ಕೆ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್, ದಂಗೆ ನಡೆಸಿರುವುದನ್ನು ನಿರಾಕರಿಸಿದ್ದಾರೆ.
ಮಿಲಿಟರಿ ಕಾನೂನು ಜಾರಿಗೊಳಿಸಿದ ಯೂನ್ರನ್ನು ಸಂಸತ್ನಲ್ಲಿ ದೋಷಾರೋಪಣೆಗೆ ಒಳಪಡಿಸಿದ ಬಳಿಕ ಹುದ್ದೆಯಿಂದ ವಜಾಗೊಳಿಸಲಾಗಿದೆ. ಯೆಯೋಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಬಳಿಕ ಜನವರಿಯಲ್ಲಿ ಬಂಧಿಸಲಾಗಿತ್ತು. ಮಿಲಿಟರಿ ಕಾನೂನು ಜಾರಿಗೊಳಿಸುವ ಮೂಲಕ ದಂಗೆಯ ಆರೋಪವನ್ನು ಯೆಯೋಲ್ ಎದುರಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ ಯೆಯೋಲ್ ` ಕೇವಲ ಕೆಲ ಗಂಟೆ ಮಾತ್ರ ಚಾಲ್ತಿಯಲ್ಲಿದ್ದ , ಹಿಂಸಾಚಾರ ರಹಿತ, ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಕೋರಿಕೆಯನ್ವಯ ತಕ್ಷಣ ರದ್ದುಗೊಳಿಸಿದ ಕಾರ್ಯಕ್ರಮವನ್ನು ದಂಗೆ ಎಂದು ಆರೋಪಿಸುವುದು ನಿರಾಧಾರ ಹಾಗೂ ಕಾನೂನು ಸಮ್ಮತವಲ್ಲ' ಎಂದು ಈ ಹಿಂದೆ ನ್ಯಾಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಯೆಯೋಲ್ ವಾದ ಮಂಡಿಸಿದರು ಎಂದು ವರದಿಯಾಗಿದೆ.