ಶ್ವೇತಭವನ ಪ್ರವೇಶಕ್ಕೆ ಎಪಿಎಫ್ ಸುದ್ದಿಸಂಸ್ಥೆ ವರದಿಗಾರರಿಗೆ ನಿಷೇಧ

PC : NDTV
ವಾಶಿಂಗ್ಟನ್: ನ್ಯಾಯಾಲಯದ ಆದೇಶದ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ ಸಲ್ವಡೋರ್ ಅಧ್ಯಕ್ಷ ನಯೀಬ್ ಬುಕೆಲೆ ಅವರ ಜೊತೆ ಶ್ವೇತಭವನದ ಓವಲ್ ಕಚೇರಿಯಲ್ಲಿ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುವುದಕ್ಕೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಆಸೋಸಿಯೇಟೆಡ್ ಪ್ರೆಸ್ ಕಾನ್ಫರೆನ್ಸ್‌ನ ವರದಿಗಾರ ಹಾಗೂ ಛಾಯಾಗ್ರಾಹಕರಿಗೆ ಶ್ವೇತಭವನ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.
ಮೆಕ್ಸಿಕೊ ಕೊಲ್ಲಿಯನ್ನು ಅಮೆರಿಕ ಕೊಲ್ಲಿಯೆಂದು ಮರುನಾಮಕರಣಗೊಳಿಸುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಆಸೋಸಿಯೇಟೆಡ್ ಪ್ರೆಸ್ ಸಂಸ್ಥೆಯ ಸಿಬ್ಬಂದಿಗೆ ಶ್ವೇತಭವನ ಪ್ರವೇಶವನ್ನು ಟ್ರಂಪ್ ಆಡಳಿತ ನಿಷೇಧಿಸಿತ್ತು. ಆದರೆ ಕಳೆದ ವಾರ ಅಮೆರಿಕದ ಫೆಡರಲ್ ನ್ಯಾಯಾಲವು ಟ್ರಂಪ್ ಸರಕಾರದ ಈ ನಿರ್ಧಾರವು ಕಾನೂನುಬಾಹಿರವಾಗಿದ್ದು, ನಿಷೇಧವನ್ನು ರದ್ದುಪಡಿಸುವಂತೆ ಸೂಚಿಸಿತ್ತು. ಆದರೆ ಪ್ರಕರಣದ ವಿಚಾರಣೆಯ ವೇಳೆ ನಡೆಸಲಾಗುವ ಯಾವುದೇ ಬದಲಾವಣೆಗಳನ್ನು ಮಾಡುವುದಿದ್ದಲ್ಲಿ ಅದನ್ನು ವಿಳಂಬಿಸಬೇಕೆಂಬ ಟ್ರಂಪ್ ಸರಕಾರದ ಮನವಿಯನ್ನು ನ್ಯಾಯಾಲಯ ಗುರುವಾರ ಆಲಿಕೆಗೆ ಕೈಗೆತ್ತಿಕೊಳ್ಳಲಿದೆ.
ಆದಾಗ್ಯೂ ಸೋಮವಾರದಂದು ಶ್ವೇತಭವನದ ದಕ್ಷಿಣ ಭಾಗದ ಹುಲ್ಲುಹಾಸಿನಲ್ಲಿ ಓಹಿಯೋರಾಜ್ಯದ ಚಾಂಪಿಯನ್ ಶಿಪ್ ಫುಟ್ಬಾಲ್ ತಂಡವನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಎಪಿ ಎಫ್ ಸುದ್ದಿಸಂಸ್ಥೆಯ ಇಬ್ಬರು ಛಾಯಾಗ್ರಾಹಕರಿಗೆ ಪ್ರವೇಶಾನುಮತಿ ನೀಡಲಾಗಿತ್ತು. ಆದರೆ ವರದಿಗಾರನಿಗೆ ಒಳಕ್ಕೆ ಬಿಟ್ಟಿರಲಿಲ್ಲ.
ಮೆಕ್ಸಿಕೊ ಕೊಲ್ಲಿಯನ್ನು ಅಮೆರಿಕ ಕೊಲ್ಲಿಯೆಂದು ಮರುನಾಮಕರಣಗೊಳಿಸಬೇಕೆಂಬ ಅಮೆರಿಕ ಅಧ್ಯಕ್ಷರ ಆದೇಶವನ್ನು ಅನುಸರಿಸದೆ ಇರುವ ಆಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯ ನಿರ್ಧರಿಸಿದ ಬಳಿಕ ಟ್ರಂಪ್ ಆಡಳಿತ ಆ ಸುದ್ದಿಸಂಸ್ಥೆಯ ಪತ್ರಕರ್ತರಿಗೆ ಶ್ವೇತಭವನ ಪ್ರವೇಶಕ್ಕೆ ನಿಷೇಧ ವಿಧಿಸಿತ್ತು.