ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ಮೃತದೇಹ ನದಿಯಲ್ಲಿ ಪತ್ತೆ
Update: 2024-12-30 16:35 GMT
ಲಂಡನ್ : ಈ ತಿಂಗಳ ಆರಂಭದಿಂದಲೂ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ಸಾಂತ್ರಾ ಸಜು ಅವರ ಮೃತದೇಹ ಸ್ಕಾಟ್‍ಲ್ಯಾಂಡ್‍ನ ನದಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಕೇರಳ ಮೂಲದ 22 ವರ್ಷದ ಸಾಂತ್ರಾ ಸಜು ಸ್ಕಾಟ್‍ಲ್ಯಾಂಡ್ ರಾಜಧಾನಿ ಎಡಿನ್‍ಬರ್ಗ್‍ನಲ್ಲಿರುವ ಹೆರಾಯ್ಟ್ ವ್ಯಾಟ್ ವಿವಿಯಲ್ಲಿ ವಿದ್ಯಾರ್ಥಿನಿಯಾಗಿ ನೋಂದಾಯಿಸಿಕೊಂಡಿದ್ದರು. ಡಿಸೆಂಬರ್ 6ರಂದು ಸಂಜೆ ಲಿವಿಂಗ್‍ಸ್ಟನ್ ನಗರದ ಸೂಪರ್ ಮಾರ್ಕೆಟ್‍ನಲ್ಲಿ ಈಕೆ ಖರೀದಿ ನಡೆಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಸ್ಕಾಟ್‍ಲ್ಯಾಂಡ್ ಬಳಿ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು ವಿದ್ಯಾರ್ಥಿನಿಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು ಔಪಚಾರಿಕ ಗುರುತಿಸುವಿಕೆಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.