ತೈವಾನ್‍ನೊಂದಿಗೆ ಚೀನಾದ ಪುನರ್ ಏಕೀಕರಣವನ್ನು ಯಾರೂ ತಡೆಯಲಾರರು: ಕ್ಸಿ ಜಿಂಪಿಂಗ್
Update: 2024-12-31 15:54 GMT
ಬೀಜಿಂಗ್ : ತೈವಾನ್‍ನೊಂದಿಗೆ ಚೀನಾದ ಪುನರ್ ಏಕೀಕರಣವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಹೇಳಿದ್ದಾರೆ.
ಮಂಗಳವಾರ ಹೊಸ ವರ್ಷದ ಸಂದೇಶ ನೀಡಿದ ಜಿಂಪಿಂಗ್, ತೈವಾನ್ ಜಲಸಂಧಿಯ ಎರಡೂ ಕಡೆಯಿರುವ ಜನರು ಒಂದೇ ಕುಟುಂಬದವರು. ನಮ್ಮ ಕುಟುಂಬದ ಬಂಧಗಳನ್ನು ಯಾರೂ ಕಡಿದುಹಾಕಲು ಸಾಧ್ಯವಿಲ್ಲ ಮತ್ತು ರಾಷ್ಟ್ರೀಯ ಪುನರೇಕೀಕರಣದ ಐತಿಹಾಸಿಕ ಪ್ರವೃತ್ತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಸಿಸಿಟಿವಿಯಲ್ಲಿ ಪ್ರಸಾರಗೊಂಡ ಭಾಷಣದಲ್ಲಿ ಕ್ಸಿಜಿಂಪಿಂಗ್ ಹೇಳಿದ್ದು ತೈವಾನ್ ದ್ವೀಪದ ಸ್ವಾತಂತ್ರ್ಯದ ಪರ ಇರುವ ಒಳಗಿನ ಮತ್ತು ಹೊರಗಿನ ಶಕ್ತಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡುವುದಾಗಿ ಘೋಷಿಸಿದ್ದಾರೆ.