ಅಮೆರಿಕ | ಟ್ರಕ್ ಸ್ಫೋಟಕ್ಕೂ ಮುನ್ನ ಆರೋಪಿ ತಲೆಗೆ ಗುಂಡು ಹಾರಿಸಿಕೊಂಡಿದ್ದ ; ವರದಿ
ವಾಷಿಂಗ್ಟನ್ : ಅಮೆರಿಕದ ಲಾಸ್ ವೆಗಾಸ್‍ನಲ್ಲಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಲಕತ್ವದ ಹೋಟೆಲ್ ಎದುರು ಟ್ರಕ್ ಸ್ಫೋಟಗೊಳ್ಳುವುದಕ್ಕೂ ಮುನ್ನ ಟ್ರಕ್‍ನೊಳಗೆ ಇದ್ದ ಅಮೆರಿಕದ ಯೋಧ ತಲೆಗೆ ಗುಂಡು ಹಾರಿಸಿಕೊಂಡಿದ್ದ. ಈತ ಸ್ಫೋಟ ನಡೆಸಿ ಹೆಚ್ಚಿನ ಹಾನಿ ಎಸಗಲು ಬಯಸಿದ್ದ. ಆದರೆ ಉಕ್ಕಿನ ದೇಹ ಹೊಂದಿದ್ದ ಟ್ರಕ್ ಸ್ಫೋಟದ ತೀವ್ರತೆಯನ್ನು ಕಡಿಮೆಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟ್ರಕ್‍ನಲ್ಲಿ ಚಾಲಕನ ಸೀಟ್‍ನ ಬಳಿ ಪಿಸ್ತೂಲೊಂದು ಪತ್ತೆಯಾಗಿದೆ. ಕೊಲರಾಡೊ ನಿವಾಸಿ, 37 ವರ್ಷದ ಮ್ಯಾಥ್ಯೂ ಲಿವೆಲ್ಸ್‍ಬರ್ಗರ್ ಶಂಕಿತ ಆರೋಪಿ ಎಂದು ಕ್ಲಾರ್ಕ್ ಕೌಂಟಿಯ ಮುಖ್ಯಾಧಿಕಾರಿ ಕೆವಿನ್ ಮೆಕ್‍ಮಹಿಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ಟ್ರಕ್‍ನ ಒಳಭಾಗ ಜಖಂಗೊಂಡಿದ್ದು ಮತ್ತೊಂದು ಪಿಸ್ತೂಲ್, ಹಲವು ಸ್ಫೋಟಕಗಳು, ಪಾಸ್‍ಪೋರ್ಟ್, ಮಿಲಿಟರಿ ಗುರುತು ಚೀಟಿ, ಕ್ರೆಡಿಟ್ ಕಾರ್ಡ್‍ಗಳು, ಐಫೋನ್ ಮತ್ತು ಸ್ಮಾರ್ಟ್‍ಫೋನ್‍ಗಳು ಬೆಂಕಿಯಲ್ಲಿ ಬಹುತೇಕ ಸುಟ್ಟುಹೋಗಿವೆ ಎಂದವರು ಮಾಹಿತಿ ನೀಡಿದ್ದಾರೆ.