ಅಮೆರಿಕ `ಹೌಸ್' ಸ್ಪೀಕರ್ ಆಗಿ ಮೈಕ್ ಜಾನ್ಸನ್ ಮರು ಆಯ್ಕೆ
Update: 2025-01-04 17:13 GMT
ವಾಷಿಂಗ್ಟನ್: ಅಮೆರಿಕ ಸಂಸತ್‍ನ ಕೆಳಮನೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಸ್ಪೀಕರ್ ಆಗಿ ರಿಪಬ್ಲಿಕನ್ ಅಭ್ಯರ್ಥಿ ಮೈಕ್ ಜಾನ್ಸನ್ ಮರು ಆಯ್ಕೆಗೊಂಡಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷ ತನ್ನ ಅಭ್ಯರ್ಥಿಯಾಗಿ ಹಕೀಮ್ ಜೆಫ್ರೀಸ್ ರನ್ನು ಕಣಕ್ಕೆ ಇಳಿಸಿತ್ತು. ಈ ಮಧ್ಯೆ ರಿಪಬ್ಲಿಕನ್ ಪಕ್ಷದ ಕೆಲವರು ಜಾನ್ಸನ್‍ರನ್ನು ವಿರೋಧಿಸಿದ್ದರಿಂದ, ಜಾನ್ಸನ್ ಸ್ಪೀಕರ್ ಆಗಬೇಕೇ ಎಂಬುದನ್ನು ನಿರ್ಧರಿಸಲು ಪಕ್ಷದ ಸಂಸದರೊಳಗೆ ಮತದಾನ ಅನಿವಾರ್ಯವಾಗಿತ್ತು. ಅಂತಿಮವಾಗಿ ಬಹುಮತದ ಆಯ್ಕೆಯಾಗಿ ಜಾನ್ಸನ್ ಹೊರಹೊಮ್ಮಿದ್ದು ಇದಕ್ಕೆ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ದೊರಕಿದೆ. ಬಳಿಕ ನಡೆದ ಸ್ಪೀಕರ್ ಚುನಾವಣೆಯಲ್ಲಿ ಜಾನ್ಸನ್ ಗೆಲುವು ಪಡೆದಿರುವುದಾಗಿ ವರದಿಯಾಗಿದೆ.