ಪಶ್ಚಿಮದಂಡೆ: ಇಸ್ರೇಲಿ ಪ್ರಜೆಗಳಿದ್ದ ಬಸ್ಸಿನ ಮೇಲೆ ದಾಳಿ: 3 ಸಾವು
Update: 2025-01-06 16:22 GMT
ಜೆರುಸಲೇಂ : ಆಕ್ರಮಿತ ಪಶ್ಚಿಮದಂಡೆಯಲ್ಲಿ ಸೋಮವಾರ ಇಸ್ರೇಲಿ ಪ್ರಜೆಗಳಿದ್ದ ಬಸ್ಸಿನ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು ಇತರ 7 ಮಂದಿ ಗಾಯಗೊಂಡಿರುವುದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.
ಅಲ್-ಫುಂಡುಕ್ ಎಂಬ ಫೆಲೆಸ್ತೀನಿಯನ್ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆದಿದ್ದು ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ದಾಳಿಕೋರರ ಬಗ್ಗೆ ಮಾಹಿತಿಯಿಲ್ಲ ಎಂದು ಇಸ್ರೇಲ್‍ನ ರಕ್ಷಣಾ ಕಾರ್ಯಾಚರಣೆ ತಂಡದ ಮೂಲಗಳು ಹೇಳಿವೆ. 2023ರ ಅಕ್ಟೋಬರ್ 7ರಂದು ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡಂದಿನಿಂದ ಪಶ್ಚಿಮದಂಡೆಯಲ್ಲಿ ಇಸ್ರೇಲ್‍ನ ಗುಂಡಿನ ದಾಳಿಯಲ್ಲಿ ಕನಿಷ್ಟ 835 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.