ಪಶ್ಚಿಮದಂಡೆ: ಇಸ್ರೇಲ್ ಸೇನೆಯ ದಾಳಿಯಲ್ಲಿ ಇಬ್ಬರು ಮೃತ್ಯು
Update: 2025-01-07 15:39 GMT
ರಮಲ್ಲಾ: ಪಶ್ಚಿಮದಂಡೆಯ ಉತ್ತರ ಭಾಗದಲ್ಲಿ ಇಸ್ರೇಲ್ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.
ತಮ್ಮೂನ್ ಗ್ರಾಮದಲ್ಲಿ ಇಸ್ರೇಲ್ ಪಡೆಯ ಶೆಲ್ ದಾಳಿಯಲ್ಲಿ 18 ವರ್ಷದ ಯುವಕ ಮೃತಪಟ್ಟಿದ್ದು ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಲೌಝಾ ಗ್ರಾಮದಲ್ಲಿ ತನ್ನ ಮನೆಯ ಎದುರು ನಿಂತಿದ್ದ ವ್ಯಕ್ತಿಯನ್ನು ಇಸ್ರೇಲ್ ಪಡೆ ಗುಂಡಿಕ್ಕಿ ಸಾಯಿಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿದ ವರದಿ ಹೇಳಿದೆ. ತಮ್ಮೂನ್ ಪ್ರದೇಶದಲ್ಲಿ ಸಶಸ್ತ್ರ ಭಯೋತ್ಪಾದಕರ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಸೇನೆ ಪ್ರತಿಕ್ರಿಯಿಸಿದೆ.