ಅಮೆರಿಕ ಬೆದರಿಕೆಗೆ ಬಗ್ಗುವುದಿಲ್ಲ: ಕೆನಡಾ

Update: 2025-01-08 14:57 GMT

ಜಸ್ಟಿನ್ ಟ್ರೂಡೊ (PTI)

ಒಟ್ಟಾವ : ಕೆನಡಾವು ಅಮೆರಿಕದ 51ನೇ ರಾಜ್ಯವಾಗಲು ಆರ್ಥಿಕ ಬಲ ಬಳಕೆಗೂ ಸಿದ್ಧ ಎಂಬ ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೆನಡಾ ಹಂಗಾಮಿ ಪ್ರಧಾನಿ ಜಸ್ಟಿನ್ ಟ್ರೂಡೊ, ಇದು ಎಂದಿಗೂ ಸಾಧ್ಯವಾಗದು ಎಂದಿದ್ದಾರೆ.

ಕೆನಡಾವು ಅಮೆರಿಕದ ಜತೆ ವಿಲೀನಗೊಳ್ಳುವ ಸಾಧ್ಯತೆಯನ್ನು ಕಲ್ಪಿಸಲೂ ಸಾಧ್ಯವಿಲ್ಲ. ಎರಡೂ ದೇಶಗಳು ಪರಸ್ಪರ ಅತೀ ದೊಡ್ಡ ವ್ಯಾಪಾರ ಮತ್ತು ಭದ್ರತಾ ಪಾಲುದಾರರಾಗಿ ಇರುವುದರಿಂದ ಎರಡೂ ದೇಶಗಳ ಕಾರ್ಮಿಕರು ಮತ್ತು ಸಮುದಾಯಕ್ಕೆ ಪ್ರಯೋಜನವಾಗಲಿದೆ ಎಂದು ಟ್ರೂಡೋ ಹೇಳಿದ್ದಾರೆ. ಟ್ರಂಪ್ ಅವರ ಹೇಳಿಕೆಯು ಕೆನಡಾದ ಬಗ್ಗೆ , ಕೆನಡಾ ಹೇಗೆ ಬಲಿಷ್ಟ ದೇಶವಾಗಿದೆ ಎಂಬ ಕುರಿತ ಸಂಪೂರ್ಣ ತಿಳುವಳಿಕೆಯ ಕೊರತೆಯನ್ನು ಸೂಚಿಸಿದೆ. ನಮ್ಮ ಅರ್ಥವ್ಯವಸ್ಥೆ ಬಲಿಷ್ಟವಾಗಿದೆ, ನಮ್ಮ ಜನರು ಬಲಿಷ್ಟವಾಗಿದ್ದಾರೆ ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಪ್ರತಿಕ್ರಿಯಿಸಿದ್ದು ದೇಶವು ಬೆದರಿಕೆಗೆ ಎಂದಿಗೂ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News