ಜಪಾನ್: ವೈದ್ಯಕೀಯ ಹೆಲಿಕಾಪ್ಟರ್ ಅಪಘಾತದಲ್ಲಿ ಮೂವರು ಮೃತ್ಯು
Update: 2025-04-07 22:42 IST

PC : Japan Coast Guard
ಟೋಕ್ಯೊ: ನೈಋತ್ಯ ಜಪಾನ್‍ನ ಬಳಿ ವೈದ್ಯಕೀಯ ಹೆಲಿಕಾಪ್ಟರ್ ಸಮುದ್ರಕ್ಕೆ ಪತನಗೊಂಡಿದ್ದು ಮೂವರು ಸಾವನ್ನಪ್ಪಿದ್ದಾರೆ ಎಂದು ಕರಾವಳಿ ಭದ್ರತಾ ಪಡೆ ಸೋಮವಾರ ಹೇಳಿದೆ.
ನಾಗಾಸಾಕಿ ವಲಯದ ತುಷಿಮಾ ದ್ವೀಪದಿಂದ ಫುಕುವೊಕ ನಗರದ ಆಸ್ಪತ್ರೆಗೆ 86 ವರ್ಷದ ರೋಗಿಯನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿತ್ತು. ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡ ಕೆಲ ಗಂಟೆಗಳ ಬಳಿಕ ಸಮುದ್ರದಲ್ಲಿ ಬಿದ್ದ ಹೆಲಿಕಾಪ್ಟರ್ ಹಾಗೂ 6 ಮಂದಿಯನ್ನು ಗಸ್ತು ನೌಕೆಯೊಂದು ಪತ್ತೆಹಚ್ಚಿ ತಕ್ಷಣ ಅವರನ್ನು ತೀರಕ್ಕೆ ಸ್ಥಳಾಂತರಿಸಿದೆ. ಆದರೆ ರೋಗಿ, ಅವರ ಜತೆಗಿದ್ದ ಕುಟುಂಬ ಸದಸ್ಯ ಹಾಗೂ ವೈದ್ಯರು ಸಾವನ್ನಪ್ಪಿದ್ದರು. ಹೆಲಿಕಾಪ್ಟರ್ ನ ರೆಕ್ಕೆಯನ್ನು ಹಿಡಿದು ನೇತಾಡುತ್ತಿದ್ದ ಇತರ ಮೂವರು ಚೇತರಿಸಿಕೊಂಡಿದ್ದಾರೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.