ಶೂನ್ಯ ಸುಂಕ: ಯುರೋಪಿಯನ್ ಯೂನಿಯನ್ ಪ್ರಸ್ತಾಪ
Update: 2025-04-07 23:06 IST
ಬ್ರಸೆಲ್ಸ್: ಕೈಗಾರಿಕಾ ಸರಕುಗಳಿಗೆ `ಶೂನ್ಯಕ್ಕೆ ಶೂನ್ಯ ಸುಂಕ'ಗಳನ್ನು ವಿಧಿಸುವ ಪ್ರಸ್ತಾಪವನ್ನು ಅಮೆರಿಕದ ಮುಂದೆ ಇರಿಸಿರುವುದಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್‍ಡೆರ್ ಲೆಯೆನ್ ಹೇಳಿದ್ದಾರೆ.
ನಾವು ಒಗ್ಗೂಡಿ ಅಮೆರಿಕದ ಜೊತೆ ಮಾತುಕತೆಗೆ ಸಿದ್ಧವಿದ್ದೇವೆ. ಇತರ ಹಲವು ವ್ಯಾಪಾರ ಪಾಲುದಾರರ ಜತೆ ಮಾಡಿಕೊಂಡ ಒಪ್ಪಂದದ ರೀತಿಯಲ್ಲಿಯೇ ಅಮೆರಿಕದ ಜೊತೆ ಶೂನ್ಯಕ್ಕೆ ಶೂನ್ಯ ಸುಂಕ ನೀತಿಗೆ ನಾವು ಸಿದ್ಧ. ಯಾಕೆಂದರೆ ಯುರೋಪ್ ಯಾವತ್ತೂ ಉತ್ತಮ ಒಪ್ಪಂದಕ್ಕೆ ಸಿದ್ಧವಿರುತ್ತದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ಪರಸ್ಪರ ಸುಂಕ ಕ್ರಮದ ಬಗ್ಗೆ ಅಮೆರಿಕದ ಜತೆ ಮಾತುಕತೆಗೆ 50ಕ್ಕೂ ಹೆಚ್ಚು ದೇಶಗಳು ನಿರ್ಧರಿಸಿವೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.