ಅಮೆರಿಕದ ಸುಂಕ ನೀತಿ ಯಶಸ್ವಿ; ಚೀನಾದ ಮಾರುಕಟ್ಟೆ ತತ್ತರಿಸಿದೆ: ಟ್ರಂಪ್

Update: 2025-04-07 21:52 IST
ಅಮೆರಿಕದ ಸುಂಕ ನೀತಿ ಯಶಸ್ವಿ; ಚೀನಾದ ಮಾರುಕಟ್ಟೆ ತತ್ತರಿಸಿದೆ: ಟ್ರಂಪ್

Photo : PTI

  • whatsapp icon

ವಾಷಿಂಗ್ಟನ್: ನಮ್ಮ ಆಮದುಗಳ ಮೇಲೆ ಸುಂಕವನ್ನು ಹೇರಿದ ನಂತರ ಚೀನಾದ ಮಾರುಕಟ್ಟೆಗಳು ಕುಸಿದಿವೆ ಎಂದು ಟ್ರಂಪ್ ಪ್ರತಿಪಾದಿಸಿದ್ದು ಅತೀ ಹೆಚ್ಚು ದುರುಪಯೋಗ ಮಾಡುತ್ತಿದ್ದ ಚೀನಾವನ್ನು ತತ್ತರಿಸುವಂತೆ ಮಾಡಿದ ಸುಂಕ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

`ತೈಲ ಬೆಲೆಗಳು ಇಳಿದಿವೆ. ಬಡ್ಡಿ ದರಗಳು ಇಳಿದಿವೆ. ಆಹಾರ ಬೆಲೆಗಳು ಇಳಿದಿವೆ. ಹಣದುಬ್ಬರವಿಲ್ಲ. ಮತ್ತು ದೀರ್ಘಾವಧಿಯಿಂದ ಅಮೆರಿಕವನ್ನು ದುರುಪಯೋಗ ಪಡಿಸಿಕೊಂಡ ದೇಶಗಳಿಂದ ಒಂದು ವಾರದಲ್ಲಿಯೇ ಕೋಟ್ಯಂತರ ಡಾಲರ್ ಗಳು ಮರಳಿ ಬಂದಿವೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೆರಿಕವನ್ನು ದುರುಪಯೋಗಪಡಿಸಿಕೊಂಡ ದೇಶಗಳು ಪ್ರತಿಕ್ರಮ ಕೈಗೊಳ್ಳಬಾರದು ಎಂಬ ನನ್ನ ಎಚ್ಚರಿಕೆಯ ಹೊರತಾಗಿಯೂ ಚೀನಾವು ಈಗಾಗಲೇ ಅಮೆರಿಕದ ವಿರುದ್ಧ ಅಧಿಕ ಸುಂಕ ಜಾರಿಗೊಳಿಸಿದ್ದರೂ ಹೆಚ್ಚುವರಿ 34% ಸುಂಕ ಘೋಷಿಸಿದೆ. ಅಮೆರಿಕದ ಮೃದುನೀತಿಯ ಲಾಭ ಪಡೆದು ಈ ದೇಶಗಳು ಸಾಕಷ್ಟು ಪ್ರಯೋಜನ ಪಡೆದುಕೊಂಡಿವೆ. ಈ ಮಧ್ಯೆ, ಅಮೆರಿಕದ ಸುಂಕಗಳು ಹಣದುಬ್ಬರ ಏರಿಕೆಯಾಗಲು ಮತ್ತು ಅಭಿವೃದ್ಧಿ ನಿಧಾನವಾಗಲು ಕಾರಣವಾಗಬಹುದು ಎಂದು ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News