ಸುಂಕ ವಿಧಿಕೆಯಿಂದ ಪ್ರತಿದಿನ 200 ಕೋಟಿ ಡಾಲರ್ ಆದಾಯ: ಟ್ರಂಪ್ ಪ್ರತಿಪಾದನೆ

Update: 2025-04-09 08:57 IST
ಸುಂಕ ವಿಧಿಕೆಯಿಂದ ಪ್ರತಿದಿನ 200 ಕೋಟಿ ಡಾಲರ್ ಆದಾಯ: ಟ್ರಂಪ್ ಪ್ರತಿಪಾದನೆ

PC | x.com/WhiteHouse

  • whatsapp icon

ವಾಷಿಂಗ್ಟನ್: ಆಕ್ರಮಣಕಾರಿ ವ್ಯಾಪಾರ ನೀತಿಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕ ಇದೀಗ ಹೊಸದಾಗಿ ಜಾರಿಗೊಳಿಸಿರುವ ಸುಂಕದಿಂದಾಗಿ ವಿದೇಶಿ ಆಮದಿನಲ್ಲಿ ಪ್ರತಿ ದಿನ ಕೋಟ್ಯಂತರ ಡಾಲರ್ಗಳ ಆದಾಯ ಹರಿದು ಬರುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಮಂಗಳವಾರ ಸಂಜೆ ಶ್ವೇತಭವನದ ಪೂರ್ವ ಕೊಠಡಿಯಲ್ಲಿ ಕಲ್ಲಿದದಲು ಉದ್ಯಮವನ್ನು ಉತ್ತೇಜಿಸುವ ಸರಣಿ ಎಕ್ಸಿಕ್ಯೂಟಿವ್ ಆದೇಶಗಳಿಗೆ ಸಹಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 60ಕ್ಕೂ ಹೆಚ್ಚು ದೇಶಗಳಿಗೆ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಯಾಗಲಿರುವ ಸುಂಕದ ವಿಚಾರದಲ್ಲಿ ವ್ಯಾಪಾರ ಪಾಲುದಾರರ ಜತೆಗಿನ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಟ್ರಂಪ್ ಸಮಯಾವಕಾಶ ಪಡೆದಿದ್ದರು.

ಸಂಸದರು, ಸಂಪುಟ ಸದಸ್ಯರು, ಉದ್ಯಮಗಳ ಗಣ್ಯರು ಮತ್ತು ಕಲ್ಲಿದ್ದಲು ಗಣಿಗಾರಿಕೆಯವರ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಸುಂಕದ ಪರಿಣಾಮ ಒಂದು ಬಗೆಯಲ್ಲಿ ಸ್ಫೋಟಕ ಎಂದು ಬಣ್ಣಿಸಿದರು. ಆದರೆ ಅವುಗಳು ಅಮೆರಿಕದ ಉದ್ಯಮದ ಪುನರುಜ್ಜೀವನಕ್ಕೆ ಪ್ರಮುಖ ಎಂದು ವಿಶ್ಲೇಷಿಸಿದರು.

"ಸುಂಕ ಜಾರಿಯಾಗಿದೆ; ನಾವು ಹಿಂದೆಂದೂ ನೋಡದಂಥ ಪ್ರಮಾಣದಲ್ಲಿ ಹಣ ಹರಿದು ಬರಲಿದೆ" ಎಂದು ಟ್ರಂಪ್ ನುಡಿದರು. ಸುಂಕ ಈಗಾಗಲೇ ದಿನಕ್ಕೆ 200 ಕೋಟಿ ಡಾಲರ್ ಆದಾಯ ಸೃಷ್ಟಿಸುತ್ತಿದೆ ಎಂದು ಹೇಳಿಕೊಂಡರು. ಆದರೆ ಯಾವ ವಲಯದಿಂದ ಎಷ್ಟು ಸುಂಕ ಬರುತ್ತಿದೆ ಎಂಬ ಅಂಕಿ ಅಂಶಗಳನ್ನು ಬಹಿರಂಗಪಡಿಸಲಿಲ್ಲ. ಆದರೆ ಹಲವು ದೇಶಗಳಿಂದ ವಿನಾಯ್ತಿ ಬಗ್ಗೆ ಒಪ್ಪಂದ ಮಾಡಿಕೊಳ್ಳಲು ಮನವಿಗಳು ಬರುತ್ತಿವೆ ಎಂದು ಸ್ಪಷ್ಟಪಡಿಸಿದರು.

ಏತನ್ಮಧ್ಯೆ ಅಚ್ಚರಿಯ ಗಳಿಕೆಯೊಂದಿಗೆ ಮಂಗಳವಾರ ಆರಂಭವಾದ ಅಮೆರಿಕದ ಷೇರು ಮಾರುಕಟ್ಟೆ ವಹಿವಾಟು, ಟ್ರಂಪ್ ಅವರ ವ್ಯಾಪಾರ ಸಮರದಿಂದಾಗಿ ಮತ್ತೆ ಗಣನೀಯ ನಷ್ಟ ಅನುಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News