ಪ್ರಧಾನಿ ಮೋದಿಗೆ `ಶ್ರೀಲಂಕಾ ಮಿತ್ರ ವಿಭೂಷಣ' ಪುರಸ್ಕಾರ ಪ್ರದಾನ

Update: 2025-04-06 20:58 IST
ಪ್ರಧಾನಿ ಮೋದಿಗೆ `ಶ್ರೀಲಂಕಾ ಮಿತ್ರ ವಿಭೂಷಣ ಪುರಸ್ಕಾರ ಪ್ರದಾನ

ಪ್ರಧಾನಿ ಮೋದಿ | PC : NDTV 

  • whatsapp icon

ಕೊಲಂಬೊ: ಪ್ರಧಾನಿ ನರೇಂದ್ರ ಮೋದಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪುರಸ್ಕಾರ `ಶ್ರೀಲಂಕಾ ಮಿತ್ರ ವಿಭೂಷಣ'ವನ್ನು ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಪ್ರದಾನ ಮಾಡಿದ್ದಾರೆ.

ಈ ಅತ್ಯುನ್ನತ ಗೌರವವನ್ನು 1.4 ಶತಕೋಟಿ ದೇಶವಾಸಿಗಳಿಗೆ ಹಾಗೂ ಭಾರತ ಮತ್ತು ಶ್ರೀಲಂಕಾ ನಡುವೆ ಆಳವಾಗಿ ಬೇರೂರಿರುವ ಸ್ನೇಹಕ್ಕೆ ಅರ್ಪಿಸುವುದಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ನಲ್ಲಿ ಮೋದಿ ಹೇಳಿದ್ದಾರೆ.

ಪುರಸ್ಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ `ಶ್ರೀಲಂಕಾದ ಅಭಿವೃದ್ಧಿಯ ಪಯಣವನ್ನು ಬೆಂಬಲಿಸಲು ಭಾರತಕ್ಕೆ ಹೆಮ್ಮೆಯಾಗುತ್ತಿದೆ. ಶ್ರೀಲಂಕಾಕ್ಕೆ ತನ್ನ ಭೇಟಿಯು ದ್ವಿಪಕ್ಷೀಯ ಸಂಬಂಧಕ್ಕೆ ಆವೇಗವನ್ನು ನೀಡುತ್ತದೆ ಎಂದರು.

ಶ್ರೀಲಂಕಾದ ಅನುರಾಧಪುರದಲ್ಲಿ ಭಾರತ ಬೆಂಬಲಿತ ಮಹೋ-ಅನುರಾಧಪುರ ರೈಲ್ವೇ ಮಾರ್ಗಕ್ಕೆ ರವಿವಾರ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಜಂಟಿಯಾಗಿ ಚಾಲನೆ ನೀಡಿದರು ಹಾಗೂ ಈ ಮಾರ್ಗದಲ್ಲಿ ಚಲಿಸುವ ರೈಲಿಗೆ ಹಸಿರು ನಿಶಾನೆ ತೋರಿದರು. ಇದೇ ಸಂದರ್ಭ ಮಹೋ-ಒಮಂಥೈ ರೈಲ್ವೇ ಹಳಿಗೆ ಚಾಲನೆ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News