ಸಾರ್ವಭೌಮ ಗಡಿಗಳಿಗೆ ಬೆದರಿಕೆ ಸಲ್ಲದು: ಟ್ರಂಪ್‍ಗೆ ಫ್ರಾನ್ಸ್, ಜರ್ಮನಿ ಎಚ್ಚರಿಕೆ

Update: 2025-01-08 15:31 GMT

ಡೊನಾಲ್ಡ್ ಟ್ರಂಪ್ | PC : PTI

  ಪ್ಯಾರಿಸ್ : ಯುರೋಪಿಯನ್ ಯೂನಿಯನ್‍ನ ಸದಸ್ಯ ಡೆನ್ಮಾರ್ಕ್‍ನ ಸ್ವಾಯತ್ತ ಪ್ರದೇಶವಾದ ಗ್ರೀನ್‍ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಫ್ರಾನ್ಸ್ ಮತ್ತು ಜರ್ಮನಿ ದೇಶಗಳು `ಸಾರ್ವಭೌಮ ಗಡಿಗಳಿಗೆ ಬೆದರಿಕೆ ಸಲ್ಲದು' ಎಂದು ಎಚ್ಚರಿಕೆ ನೀಡಿವೆ.

ತನ್ನ ಸಾರ್ವಭೌಮ ಗಡಿಯ ಮೇಲೆ ದಾಳಿ ನಡೆಸಲು ವಿಶ್ವದ ಯಾವುದೇ ದೇಶಗಳಿಗೆ, ಅದು ಯಾರೇ ಆಗಿರಲಿ, ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್ ನೊಯೆಲ್ ಬ್ಯಾರೊಟ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ನಾವು ಪ್ರಬಲ ಖಂಡವಾಗಿದ್ದು ನಾವು ನಮ್ಮನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News