ಅಮೆರಿಕ: ಕೆನಡಿ ಹತ್ಯೆಗೆ ಸಂಬಂಧಿಸಿದ ಕಡತ ಬಿಡುಗಡೆ
Update: 2025-03-19 21:59 IST

ಜಾನ್ ಎಫ್.ಕೆನಡಿ PC | AP
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿಯವರ ಹತ್ಯೆಗೆ ಸಂಬಂಧಿಸಿದ ಕಡತಗಳನ್ನು ಡೊನಾಲ್ಡ್ ಟ್ರಂಪ್ ಆಡಳಿತ ಬುಧವಾರ ಬಿಡುಗಡೆಗೊಳಿಸಿದೆ.
1963ರ ನವೆಂಬರ್ 22ರಂದು ಡಲ್ಲಾಸ್‍ನಲ್ಲಿ ನಡೆದಿದ್ದ ಕೆನಡಿ ಹತ್ಯೆಗೆ ಸಂಬಂಧಿಸಿದ 63,000ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ 2,200ಕ್ಕೂ ಅಧಿಕ ಪೈಲ್‍ಗಳನ್ನು `ನ್ಯಾಷನಲ್ ಆರ್ಕೈವ್ ಆ್ಯಂಡ್ ರೆಕಾಡ್ರ್ಸ್ ಅಡ್ಮಿನಿಸ್ಟ್ರೇಷನ್ 'ನ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಲಾಗಿದೆ. 6 ದಶಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳು, ಛಾಯಾಚಿತ್ರಗಳು, ಧ್ವನಿ ಮುದ್ರಣಗಳು ಮತ್ತು ಹತ್ಯೆಗೆ ಸಂಬಂಧಿಸಿದ ಕಲಾಕೃತಿಗಳನ್ನು ಹೊಂದಿರುವ ರಾಷ್ಟ್ರೀಯ ಸಂಗ್ರಹಾಲಯದ ಬಹುಪಾಲು ಸಂಗ್ರಹವನ್ನು ಈ ಹಿಂದೆಯೇ ಬಿಡುಗಡೆಗೊಳಿಸಲಾಗಿತ್ತು.