ಯುಎಇ ಮಧ್ಯಸ್ಥಿಕೆಯಲ್ಲಿ ರಶ್ಯ-ಅಮೆರಿಕ ಯುದ್ಧಕೈದಿಗಳ ವಿನಿಮಯ

Update: 2025-03-20 21:49 IST
ಯುಎಇ ಮಧ್ಯಸ್ಥಿಕೆಯಲ್ಲಿ ರಶ್ಯ-ಅಮೆರಿಕ ಯುದ್ಧಕೈದಿಗಳ ವಿನಿಮಯ

PC | NDTV

  • whatsapp icon

ಅಬುಧಾಬಿ: ಪೂರ್ವ ಯುರೋಪ್‍ ನಲ್ಲಿನ ಸಂಘರ್ಷವನ್ನು ಪರಿಹರಿಸುವ ಮಧ್ಯಸ್ಥಿಕೆ ಪ್ರಯತ್ನಗಳ ಭಾಗವಾಗಿ ರಶ್ಯ ಮತ್ತು ಉಕ್ರೇನ್ ನಡುವೆ 350 ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಯುಎಇ ನೆರವಾಗಿದೆ.

2022ರ ಫೆಬ್ರವರಿಯಿಂದ ಮುಂದುವರಿಯುತ್ತಿರುವ ಯುದ್ಧದಲ್ಲಿ ಸೆರೆಯಾಗಿದ್ದ ತಲಾ 175 ಯುದ್ಧಕೈದಿಗಳನ್ನು ಬುಧವಾರ ರಶ್ಯ ಮತ್ತು ಉಕ್ರೇನ್ ವಿನಿಮಯ ಮಾಡಿಕೊಂಡಿವೆ. ಇದರೊಂದಿಗೆ ಇದುವರೆಗೆ ಯುಎಇ ಮಧ್ಯಸ್ಥಿಕೆಯಲ್ಲಿ ವಿನಿಮಯಗೊಂಡ ಯುದ್ಧಕೈದಿಗಳ ಸಂಖ್ಯೆ 3,233ಕ್ಕೆ ತಲುಪಿದೆ. ಯುದ್ಧ ಕೈದಿಗಳ ವಿನಿಮಯ ಪ್ರಕ್ರಿಯೆಗೆ ಸಹಕಾರ ನೀಡಿದ ರಶ್ಯ ಮತ್ತು ಉಕ್ರೇನ್ ಸರಕಾರಗಳಿಗೆ ಯುಎಇ ವಿದೇಶಾಂಗ ಇಲಾಖೆ ಅಭಿನಂದನೆ ಸಲ್ಲಿಸಿದೆ ಎಂದು ಎಮಿರೇಟ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News