ಸುಡಾನ್ ರಾಜಧಾನಿ ಖಾರ್ಟೂಮ್ ಮರು ವಶಪಡಿಸಿಕೊಂಡ ಸೇನೆ
Update: 2025-03-21 23:03 IST

Photo Credit | indianexpress
ಖಾರ್ಟೂಮ್: ಸುಮಾರು 2 ವರ್ಷಗಳ ಹೋರಾಟದ ಬಳಿಕ ಸುಡಾನ್ ರಾಜಧಾನಿ ಖಾರ್ಟೂಮ್‍ನಲ್ಲಿ ಅರೆ ಸೇನಾಪಡೆಯ ಹಿಡಿತದಲ್ಲಿದ್ದ ಕೊನೆಯ ಭದ್ರಕೋಟೆ ರಿಪಬ್ಲಿಕನ್ ಅರಮನೆಯನ್ನು ತನ್ನ ಪಡೆ ವಶಕ್ಕೆ ಪಡೆದಿದ್ದು ಇದರೊಂದಿಗೆ ರಾಜಧಾನಿ ಖಾರ್ಟೂಮ್ ಅನ್ನು ಸಂಪೂರ್ಣ ಮರು ವಶಪಡಿಸಿಕೊಂಡಿರುವುದಾಗಿ ಸುಡಾನ್ ನ ಮಿಲಿಟರಿ ಹೇಳಿದೆ.
ನೈಲ್ ನದಿಯ ದಡದಲ್ಲಿರುವ ರಿಪಬ್ಲಿಕನ್ ಅರಮನೆ ಸೇನಾ ಮುಖ್ಯಸ್ಥ ಜ| ಅಬ್ದುಲ್ ಫತಾಹ್ ಬುರ್ಹಾನ್ ನೇತೃತ್ವದ ಮಿಲಿಟರಿಯ ವಶಕ್ಕೆ ಬಂದಿದ್ದು ಜ| ಮುಹಮ್ಮದ್ ಹಮ್ದನ್ ಡಗಾಲೊ ನೇತೃತ್ವದ ಅರೆ ಸೇನಾಪಡೆ ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ ಸುಡಾನ್ ರಾಜಧಾನಿಯಿಂದ ಪಲಾಯನ ಮಾಡಿರುವುದಾಗಿ ವರದಿಯಾಗಿದೆ. ಕಳೆದ ಕೆಲ ದಿನಗಳಿಂದ ಸುಡಾನ್ ಮಿಲಿಟರಿ ಗಮನಾರ್ಹ ಮುನ್ನಡೆ ಸಾಧಿಸಿದ್ದು ಅರೆ ಸೇನಾಪಡೆಯ ಹಲವು ಭದ್ರಕೋಟೆಗಳನ್ನು ವಶಕ್ಕೆ ಪಡೆದುಕೊಂಡಿದೆ.