11 ವರ್ಷದ ಪುತ್ರನನ್ನು ಕತ್ತು ಸೀಳಿ ಕೊಂದ ಭಾರತೀಯ ಮಹಿಳೆ

Photo | X, @SantaAnaPD
ಸಾಂಟಾ ಆ್ಯನಾ: ಡಿಸ್ನಿಲ್ಯಾಂಡ್ ಗೆ ಮೂರು ದಿನಗಳ ರಜಾಪ್ರವಾಸದಲ್ಲಿ ಹೋಗಿ ಬಂದ ಆನಂತರ ಭಾರತೀಯ ಮಹಿಳೆಯೊಬ್ಬರು ತನ್ನ 11 ವರ್ಷದ ಪುತ್ರನನ್ನು ಕತ್ತು ಸೀಳಿ ಕೊಲೆಗೈದ ಭೀಕರ ಘಟನೆ ಶನಿವಾರ ಕ್ಯಾಲಿಫೋರ್ನಿಯಾ ರಾಜ್ಯದ ಸಾಂತಾ ಆ್ಯನಾದಲ್ಲಿ ವರದಿಯಾಗಿದೆ.
ಕೊಲೆಯಾದ ಬಾಲಕನ ತಾಯಿ 48 ವರ್ಷದ ಸರಿತಾ ರಾಮರಾಜುವನ್ನು ಪೊಲೀಸರು ಬಂಧಿಸಿದ್ದಾರೆ. 2018ರಲ್ಲಿ ಪತಿ ಪ್ರಕಾಶ್ ರಾಜುವಿನಿಂದ ಆಕೆ ವಿಚ್ಚೇದನ ಪಡೆದಿದ್ದರು. ಪ್ರಕಾಶ್ ರಾಜುವಿಗೆ ಪುತ್ರನ ಕಸ್ಟಡಿಯ ಅಧಿಕಾರ ದೊರೆತರೆ, ನಿಯಮಿತವಾಗಿ ಭೇಟಿಯ ಹಕ್ಕುಗಳನ್ನು ಸರಿತಾಗೆ ರಾಮರಾಜು ನೀಡಿತ್ತು.
ತನ್ನ ಪುತ್ರನ ಕಸ್ಟಡಿ ಭೇಟಿಯ ಸಂದರ್ಭದಲ್ಲಿ ಅವರಿಬ್ಬರು ಸಾಂಟಾ ಆ್ಯನಾದ ಮೋಟೆಲ್ ಒಂದರಲ್ಲಿ ತಂಗಿದ್ದರು. ಈ ಭೇಟಿಯ ಸಂದರ್ಭದಲ್ಲಿ ಆಕೆ ತನಗೆ ಹಾಗೂ ತನ್ನ ಪುತ್ರನಿಗೆಂದು ಡಿಸ್ನಿಲ್ಯಾಂಡ್ ಪ್ರವಾಸದ ಪಾಸ್ಗಳನ್ನು ತಂದಿದ್ದರು.
ಮಾರ್ಚ್ 19ರಂದು ಸರಿತಾ ರಾಮರಾಜು ಮೊಟೇಲ್ ಅನ್ನು ತೆರವುಗೊಳಿಸಿ, ಬಾಲಕನನ್ನು ಆತನ ತಂದೆಗೆ ಹಸ್ತಾಂತರಿಸಬೇಕಿತ್ತು. ಆದರೆ ಆಕೆ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ, ತಾನು ಪುತ್ರನನ್ನು ಹತ್ಯೆಗೈದಿರುವುದಾಗಿ ಹಾಗೂ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದರು.
ಸಾಂತಾ ಆ್ಯನಾ ಪೊಲೀಸರು ಸ್ಥಳಕ್ಕೆ ಆಗಮಿಸಸಿದಾಗ ಬಾಲಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಾತ್ರೆ ಸೇವಿಸಿ ಆಸ್ವಸ್ಥಳಾದ ಸರಿತಾಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೂಡಿಸಿದ ಬಳಿಕ ಬಂಧಿಸಿದ್ದಾರೆ. ಕಳೆದ ವರ್ಷದಿಂದ ಮಗನನ್ನು ಕಸ್ಟಡಿಗೆ ತೆಗೆದುಕೊಳ್ಳುವ ವಿಚಾರದಲ್ಲಿ ಸರಿತಾ ಹಾಗೂ ಆಕೆಯ ಪತಿ ಪ್ರಕಾಶ್ ರಾಜು ಅವರ ನಡುವೆ ಕಾನೂನು ಸಮರ ನಡೆಯುತ್ತಿತ್ತು. ವಿಚ್ಛೇದಿತ ಪತಿಯು ತನ್ನ ಗಮನಕ್ಕೆ ತಾರದೆಯೇ ಪುತ್ರನ ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದನೆಂದು ಸರಿತಾ ಆಪಾದಿಸಿದ್ದಳು.