ದಕ್ಷಿಣ ಕೊರಿಯಾ: ಹ್ಯಾನ್ ಡಕ್-ಸೂ ಕಾರ್ಯಕಾರಿ ಅಧ್ಯಕ್ಷರಾಗಿ ಮರುನೇಮಕ

Update: 2025-03-24 21:48 IST
ದಕ್ಷಿಣ ಕೊರಿಯಾ: ಹ್ಯಾನ್ ಡಕ್-ಸೂ ಕಾರ್ಯಕಾರಿ ಅಧ್ಯಕ್ಷರಾಗಿ ಮರುನೇಮಕ

PC | timesofindia

  • whatsapp icon

ಸಿಯೋಲ್: ದಕ್ಷಿಣ ಕೊರಿಯಾದ ಪ್ರಧಾನಿ ಹ್ಯಾನ್ ಡಕ್-ಸೂ ಅವರ ದೋಷಾರೋಪಣೆಯನ್ನು ಸಾಂವಿಧಾನಿಕ ನ್ಯಾಯಾಲಯ ಸೋಮವಾರ ವಜಾಗೊಳಿಸಿದ್ದು ಕಾರ್ಯಕಾರಿ ಅಧ್ಯಕ್ಷರಾಗಿ ಮರು ನೇಮಕಗೊಳಿಸಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆ `ಯೊನ್ಹಾಪ್' ವರದಿ ಮಾಡಿದೆ.

ಮಿಲಿಟರಿ ಕಾನೂನು ಜಾರಿಗೊಳಿಸಿದ್ದ ಕಾರಣ ಅಮಾನತುಗೊಂಡಿರುವ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ಸ್ಥಾನದಲ್ಲಿ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಪ್ರಧಾನಿ ಹ್ಯಾನ್ ಡಕ್-ಸೂ ಅವರನ್ನು ಡಿಸೆಂಬರ್ ನಲ್ಲಿ ನೇಮಿಸಲಾಗಿತ್ತು. ಆದರೆ ಹುದ್ದೆ ವಹಿಸಿಕೊಂಡ ಕೆಲ ದಿನಗಳಲ್ಲೇ ಹ್ಯಾನ್ ಡಕ್-ಸೂ ಅವರನ್ನೂ ಸಂಸತ್‍ನಲ್ಲಿ ದೋಷಾರೋಪಣೆಗೆ ಒಳಪಡಿಸಿ ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸಾಂವಿಧಾನಿಕ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಸಾಂವಿಧಾನಿಕ ನ್ಯಾಯಾಲಯ ದೋಷಾರೋಪಣೆಯನ್ನು ವಜಾಗೊಳಿಸಿ ಹ್ಯಾನ್ ಡಕ್-ಸೂ ಅವರನ್ನು ಕಾರ್ಯಕಾರಿ ಅಧ್ಯಕ್ಷರಾಗಿ ಮರು ನೇಮಿಸುವಂತೆ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News