ದಕ್ಷಿಣ ಕೊರಿಯದಲ್ಲಿ ಕಾಡ್ಗಿಚ್ಚಿನ ಹಾವಳಿಗೆ 5 ಬಲಿ

ಸಾಂದರ್ಭಿಕ ಚಿತ್ರ
ಕನಿಷ್ಠ ಐವರಿಗೆ ಗಂಭೀರ ಗಾಯ, 1500 ಮಂದಿಯ ಸ್ಥಳಾಂತರ
ಸಿಯೋಲ್ : ದಕ್ಷಿಣ ಕೊರಿಯದ ಆಗ್ನೇಯ ಪ್ರಾಂತದಲ್ಲಿ ಕಾಡ್ಗಿಚ್ಚು ತಾಂಡವವಾಡುತ್ತಿದ್ದು, ಪ್ರದೇಶದಿಂದ ಸುಮಾರು 1500 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಕನಿಷ್ಠ ನಾಲ್ವರು ಕಾಡ್ಗಿಚ್ಚಿಗೆ ಬಲಿಯಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿ ಸಿಯೋಲ್ ನಿಂದ 250 ಕಿ.ಮೀ. ದೂರದಲ್ಲಿರುವ ಸಾಂಚಿಯೊಂಗ್ ಜಿಲ್ಲೆಯಲ್ಲಿ ಶುಕ್ರವಾರ ಆರಂಭಗೊಂಡ ಕಾಡ್ಗಿಚ್ಚು ಇತರ ಭಾಗಗಳಿಗೂ ಹರಡುತ್ತಿದೆ.
ಗಾಯಗೊಂಡ ಆರು ಮಂದಿಯ ಪೈಕಿ ಐದು ಮಂದಿಯ ಸ್ಥಿತಿ ಗಂಭೀರವಾಗಿದೆ. ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಂತೆ ವಿಪತ್ತು ನಿಯಂತ್ರಣ ಗೋಪುರದ ಉಪವರಿಷ್ಠ ಲೀ ಹಾನ್-ಕ್ಯೂಂಗ್ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಒಣ ಹವೆಯಿಂದಾಗಿ ಕಾಡ್ಗಿಚ್ಚು ಗಡಿ ಪ್ರದೇಶಗಳಲ್ಲಿ ಕ್ಷಿಪ್ರವಾಗಿ ಹರಡುತ್ತಿದೆಯೆಂದು ಲೀ ಅವರು ವಿಪತ್ತು ಪ್ರತಿಕ್ರಿಯಾ ಸಭೆಯೊಂದರಲ್ಲಿ ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದೆಂದು ಅವರು ಹೇಳಿದ್ದಾರೆ.