ಪಾಕ್ ನ ವಿವಿಧೆಡೆ ಪೊಲಿಯೋ ವೈರಸ್ ಮಾದರಿ ಪತ್ತೆ

Update: 2025-03-23 21:58 IST
ಪಾಕ್ ನ ವಿವಿಧೆಡೆ ಪೊಲಿಯೋ ವೈರಸ್ ಮಾದರಿ ಪತ್ತೆ

PC : NDTV

  • whatsapp icon

ಇಸ್ಲಾಮಾಬಾದ್: ಪಾಕಿಸ್ತಾನದ 18 ಜಿಲ್ಲೆಗಳಲ್ಲಿ ಪಡೆಯಲಾದ ಒಳಚರಂಡಿ ನೀರಿನ ಮಾದರಿಗಳಲ್ಲಿ ‘ವೈಲ್ಡ್ ಪೋಲಿಯೋ ವೈರಸ್ ಟೈಪ್ 1’ ಪತ್ತೆಯಾಗಿರುವುದನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಪೋಲಿಯೋ ನಿರ್ಮೂಲನೆಗಾಗಿನ ಪ್ರಯೋಗಾಲಯವು ರವಿವಾರ ದೃಢಪಡಿಸಿದೆ.

ಫೆಬ್ರವರಿ 21ರಿಂದ ಮಾರ್ಚ್ 6ರವರೆಗೆ ಸಂಗ್ರಹಿಸಲಾದ ಪಾರಿಸಾರಿಕ ಸ್ಯಾಂಪಲ್ ಗಳಲ್ಲಿ ‘ ವೈರಸ್’ ಇರುವುದನ್ನು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ದೃಢಪಡಿಸಿದೆ.

ಪಾಕಿಸ್ತಾನದ ಎಲ್ಲಾ ನಾಲ್ಕು ಪ್ರಾಂತ್ಯಗಳಲ್ಲಿನ ವಿವಿಧ ಒಳಚರಂಡಿ ಮಾರ್ಗಗಳಿಂದ ಈ ಮಾದರಿಗಳನ್ನು ಸಂಗ್ರಹಿಸಲಾಗಿತ್ತೆಂದು ‘ ಎಆರ್ವೈ’ ನ್ಯೂಸ್ ವರದಿ ಮಾಡಿದೆ.

ಸಿಂಧ್ನ 12 ಜಿಲ್ಲೆಗಳು, ಪಂಜಾಬ್ ಹಾಗೂ ಖೈಬರ್ ಪಖ್ತೂಂಖ್ವಾದ 12 ಜಿಲ್ಲೆಗಳಲ್ಲಿ ಈ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಇಸ್ಲಾಮಾಬಾದ್, ಬಲೂಚಿಸ್ತಾನದ ಚಮನ್, ದಕ್ಷಿಣ ವಝೀರ್ಸ್ತಾನ ಹಾಗೂ ಖೈಬರ್ ಪಖ್ತೂನ್ಖ್ವಾದ ದಿರ್, ಪಂಜಾಬ್ನ ಲಾಹೋರ್ ಹಾಗೂ ದೇರಾ ಘಾಜಿ ಖಾನ್ ಇತ್ಯಾದಿ ಕಡೆಗಳಲ್ಲಿ ವೈರಸ್ ಪತ್ತೆಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News