ಜಾನ್ ಎಫ್. ಕೆನಡಿಗೆ ಸಂಬಂಧಿಸಿದ ದಾಖಲೆಗಳು ಬಿಚ್ಚಿಟ್ಟ ರಹಸ್ಯಗಳು

Update: 2025-03-24 08:09 IST
ಜಾನ್ ಎಫ್. ಕೆನಡಿಗೆ ಸಂಬಂಧಿಸಿದ ದಾಖಲೆಗಳು ಬಿಚ್ಚಿಟ್ಟ ರಹಸ್ಯಗಳು

ಜಾನ್ ಎಫ್ ಕೆನಡಿ PC: x.com/SputnikInt

  • whatsapp icon

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿಯವರ ಹತ್ಯೆಗೆ ಸಂಬಂಧಿಸಿದ ಹಲವು ಸುಳಿವುಗಳು ಲಭ್ಯವಾಗಬಹುದು ಎಂಬ ನಿರೀಕ್ಷೆ ಇರುವ ಸಾವಿರಾರು ಪುಟಗಳಷ್ಟು ರಹಸ್ಯ ದಾಖಲೆಗಳನ್ನು ಸರ್ಕಾರ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಿದೆ. ಇದರ ಬದಲಾಗಿ ಅಮೆರಿಕದ ಬೇಹುಗಾರಿಕೆ ಬಗೆಗಿನ ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಜತೆಗೆ ಈ ಮೊದಲು ಪರಿಷ್ಕರಿಸಲಾದ ಹಲವು ವೈಯಕ್ತಿಕ ಮಾಹಿತಿಗಳನ್ನೂ ಬಿಚ್ಚಿಟ್ಟಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಾದೇಶದ ಅನ್ವಯ ಅಮೆರಿಕದ ನ್ಯಾಷನಲ್ ಆರ್ಚೀವ್ಸ್ ಅಂಡ್ ರೆಕಾರ್ಡ್ಸ್ ಅಡ್ಮಿನಿಸ್ಟ್ರೇಷನ್ ಸುಮಾರು 63 ಸಾವಿರ ಪುಟಗಳಷ್ಟು ದಾಖಲೆಗಳನ್ನು ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿದೆ. ಈ ಮೊದಲು ಹಲವು ದಾಖಲೆಗಳನ್ನು ಬಹಿರಂಗಪಡಿಸಿದ್ದರೂ, ಸಿಐಎ ಮೂಲಗಳ ಹೆಸರುಗಳನ್ನು ರಹಸ್ಯವಾಗಿಯೇ ಉಳಿಸುವ ಉದ್ದೇಶದಿಂದ ಪರಿಷ್ಕರಿಸಲಾಗಿತ್ತು ಅಥವಾ 1960ರ ದಶಕದ ಬೇಹುಗಾರಿಕೆ ಮತ್ತು ರಹಸ್ಯ ಕಾರ್ಯಾಚರಣೆಗಳ ಮಾಹಿತಿಯನ್ನು ಹುದುಗಿಸಲಾಗಿತ್ತು.

ಜಾನ್ ಎಫ್ ಕೆನಡಿಯವರನ್ನು 1963ರ ನವೆಂಬರ್ 22ರಂದು ಡಲ್ಲಾಸ್ ಗೆ ಭೇಟಿ ನೀಡಿದ ಅವಧಿಯಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಮೋಟರ್ ಕೇಡ್ ಪರೇಡ್ ರೂಟ್ ಡೌನ್ ಟೌನ್ ಮುಗಿಸಿದಾಗ, ಟೆಕ್ಸಾಸ್ ಸ್ಕೂಲ್ ಬುಕ್ ಡೆಪಾಸಿಟರಿ ಕಟ್ಟಡದಿಂದ ಗುಂಡಿನ ಸದ್ದು ಮೊಳಗಿತ್ತು. ಈ ಸಂಬಂಧ ಪೊಲೀಸರು ಲೀ ಹಾರ್ವೆ ಓಸ್ವಾಲ್ಡ್ ಎಂಬಾತನನ್ನು ಬಂಧಿಸಿದ್ದರು. ಎರಡು ದಿನಗಳ ಬಳಿಕ ನೈಟ್ಕ ಕ್ಲಬ್ ಮಾಲೀಕ ಜಾಕ್ ರೂಬಿ ಎಂಬಾತ, ಟೆಲಿವಿಷನ್ ನೇರಪ್ರಸಾರದ ವೇಳೆ ಜೈಲಿಗೆ ವರ್ಗಾವಣೆ ಮಾಡುತ್ತಿದ್ದ ಸಂದರ್ಭದಲ್ಲೇ ಓಸ್ವಾಲ್ಡ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ.

ಹೊಸದಾಗಿ ಬಹಿರಂಗಪಡಿಸಿದ ದಾಖಲೆಗಳು ಹತ್ಯೆಯ ಪಿತೂರಿ ಸಿದ್ಧಾಂತಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. 24 ವರ್ಷ ವಯಸ್ಸಿನ ಓಸ್ವಾಲ್ಡ್ ಏಕೈಕ ಬಂದೂಕುಧಾರಿ ಎಂಬ ನಿರ್ಧಾರದಿಂದ ಹೊರಕ್ಕೆ ಹೋಗುವ ಯಾವುದೇ ಅಂಶ ಇಲ್ಲ ಎಂದು ಕೆನಡಿ ತಜ್ಞರು ಹೇಳುತ್ತಾರೆ. ಸತ್ಯವನ್ನು ಬೆನ್ನಟ್ಟುವ ಕ್ರಮ ಸದಾ ಮುಂದುವರಿಯಲಿದೆ ಎಂಬ ಶಂಕೆ ನಮ್ಮದು ಎಂದು ಫಿಲಿಪ್ ಶೆನಾನ್ ಅವರು ಕೆನಡಿ ಹತ್ಯೆ ಬಗೆಗಿನ 2013ರ ಕೃತಿಯಲ್ಲಿ ಹೇಳಿದ್ದರು.

ನ್ಯಾಷನಲ್ ಆರ್ಕೀವ್ಸ್ 60 ಲಕ್ಷ ಪುಟಗಳಷ್ಟು ದಾಖಲೆಗಳು, ಫೋಟೊಗಳು, ವಿಡಿಯೊ, ಧ್ವನಿಸುರುಳಿ ಮತ್ತು ಕಲಾಕೃತಿಗಳನ್ನು ಬಿಡುಗಡೆ ಮಾಡಿದ್ದು, ಈ ವಾರ 2200 ಪುಟಗಳಷ್ಟು ದಾಖಲೆಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News