ನೈಜರ್: ಉಗ್ರಗಾಮಿಗಳ ದಾಳಿಯಲ್ಲಿ ಕನಿಷ್ಠ 44 ಮಂದಿ ಸಾವು
Update: 2025-03-22 22:00 IST
ಡಕಾರ್ : ಪಶ್ಚಿಮ ನೈಜರ್ ನ ಗ್ರಾಮದ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 44 ನಾಗರಿಕರು ಸಾವನ್ನಪ್ಪಿರುವುದಾಗಿ ದೇಶದ ಆಂತರಿಕ ಸಚಿವಾಲಯ ಹೇಳಿದೆ.
ಮಾಲಿ , ಬುರ್ಕಿನಾ ಫಾಸೊ ಮತ್ತು ನೈಜರ್ ದೇಶಗಳ ಗಡಿಭಾಗಗಳು ಸಂಧಿಸುವ ಕೊಕೊರೌ ಪ್ರಾಂತದ ಫ್ಯಾಂಬಿಟಾ ಗ್ರಾಮದ ಮಸೀದಿಯ ಮೇಲೆ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ.
ಮಸೀದಿಯನ್ನು ಸುತ್ತುವರಿದ ಬಂದೂಕುಧಾರಿಗಳ ಗುಂಪು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು 44 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು ಗಾಯಾಳುಗಳಲ್ಲಿ 13 ಮಂದಿಯ ಸ್ಥಿತಿ ಗಂಭೀರವಾಗಿದೆ. ಐಸಿಸ್ ಗುಂಪು ದಾಳಿ ನಡೆಸಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.