ಇಸ್ರೇಲ್ ವಾಯುದಾಳಿಯಲ್ಲಿ ಹಮಾಸ್ ರಾಜಕೀಯ ನಾಯಕ ದಾವಿಲ್ ಮೃತ್ಯು

ಸಲಾಹ್ ಅಲ್ ಬರ್ದಾವಿಲ್ | PC : NDTV
ಗಾಝಾ: ತನ್ನ ಹಿರಿಯ ರಾಜಕೀಯ ನಾಯಕ ಸಲಾಹ್ ಅಲ್ ಬರ್ದಾವಿಲ್ ಹಾಗೂ ಅವರ ಪತ್ನಿ, ಗಾಝಾದಲ್ಲಿ ಮಾರ್ಚ್ 22ರಂದು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟಿರುವುದನ್ನು ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ರವಿವಾರ ದೃಢಪಡಿಸಿದೆ. ದಕ್ಷಿಣ ಗಾಝಾದ ಖಾನ್ ಯೂನಿಸ್ನಲ್ಲಿ ನಡೆದ ವಾಯುದಾಳಿಯಲ್ಲಿ ಬದಾವಿಲ್ ಹಾಗೂ ಅವರ ಪತ್ನಿ ಸಾವನ್ನಪ್ಪಿರುವುದಾಗಿ ಹಮಾಸ್ನ ಹೇಳಿಕೆ ತಿಳಿಸಿದೆ.
ಕದನವಿರಾಮವನ್ನು ಮುರಿದ ಇಸ್ರೇಲಿ ಪಡೆಗಳು ಮಂಗಳವಾರ ಗಾಝಾದ ಮೇಲೆ ದಾಳಿಯನ್ನು ಪುನಾರಂಭಿಸಿತ್ತು.
ಗಾಝಾಪಟ್ಟಿಯಲ್ಲಿರುವ ತನ್ನ ಸರಕಾರದ ವರಿಷ್ಠ ಎಸ್ಸಾಮ್ ಅಲ್-ದಲೀಸ್ ಅವರು ಇಸ್ರೇಲ್ ನ ವಾಯುದಾಳಿಯಲ್ಲಿ ಮೃತಪಟ್ಟಿದ್ದಾರೆಂದು ಹಮಾಸ್ ಮಂಗಳವಾರ ದೃಢಪಡಿಸಿತ್ತು.
ಈ ನಾಯಕರು ಹಾಗೂ ಅವರ ಕುಟುಂಬಿಕರು, ಯಹೂದ್ಯ ಪಾರಮ್ಯವಾದಿ ಪಡೆಗಳ ವಾಯುದಾಳಿಯಲ್ಲಿ ಹುತಾತ್ಮರಾದರೆಂದು ಹಮಾಸ್ ಹೇಳಿಕೆ ತಿಳಿಸಿದೆ.
ಈ ದಾಳಿಯಲ್ಲಿ ಆಂತರಿಕ ಸಚಿವಾಲಯದ ವರಿಷ್ಠ ಮಹಮ್ಮೂದ್ ಅಬು ವಾತ್ಪಾ ಹಾಗೂ ಆಂತರಿಕ ಭದ್ರತಾ ಸೇವೆಯ ಮಹಾನಿರ್ದೇಶಕ ಬಹಜತ್ ಅಬು ಸುಲ್ತಾನ್ ಕೂಡಾ ದಾಳಿಗಳಲ್ಲಿ ಸಾವನ್ನಪ್ಪಿದ್ದಾರೆಂದು ಹಮಾಸ್ ಹೇಳಿಕೆ ತಿಳಿಸಿದೆ.