ಸೌದಿ ಅರೆಬಿಯಾದಲ್ಲಿ ಬಸ್ಸು ಅಪಘಾತ | 6 ಇಂಡೋನೇಶ್ಯಾದ ಉಮ್ರಾ ಯಾತ್ರಿಗಳು ಮೃತ್ಯು
Update: 2025-03-21 22:52 IST

ಸಾಂದರ್ಭಿಕ ಚಿತ್ರ
ರಿಯಾದ್: ಸೌದಿ ಅರೇಬಿಯಾದಲ್ಲಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಇಂಡೊನೇಶ್ಯಾದ 6 ಉಮ್ರಾ ಯಾತ್ರಿಕರು ಮೃತಪಟ್ಟಿದ್ದು ಇತರ 14 ಮಂದಿ ಗಾಯಗೊಂಡಿರುವುದಾಗಿ ವಿದೇಶಾಂಗ ವ್ಯವಹಾರ ಇಲಾಖೆಯಲ್ಲಿನ ನಾಗರಿಕ ರಕ್ಷಣಾ ನಿರ್ದೇಶನಾಲಯ ಮಾಹಿತಿ ನೀಡಿದೆ.
ಜೆಡ್ಡಾದಿಂದ ಸುಮಾರು 150 ಕಿ.ಮೀ ದೂರದಲ್ಲಿ ಗುರುವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು ಇಂಡೋನೇಶ್ಯಾದ ಉಮ್ರಾ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ಸು ರಸ್ತೆಯ ಬದಿಗೆ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡಿದೆ. ಗಾಯಾಳುಗಳನ್ನು ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಸಂತ್ರಸ್ತರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.