ಪಾಕ್ ಮಾಜಿ ಪ್ರಧಾನಿ ನವಾಝ್ ಷರೀಫ್ ಗೆ ಪುತ್ರಿಯ ಸರಕಾರದಲ್ಲಿ ಸರ್ಕಾರಿ ಹುದ್ದೆ

PC | PTI
ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಷರೀಫ್ ಅವರು ತಮ್ಮ ಪುತ್ರಿ ಮರಿಯಮ್ ನವಾಝ್ ನೇತೃತ್ವದ ಪಂಜಾಬ್ ಸರಕಾರದಲ್ಲಿ ಹೊಸ ಉದ್ಯೋಗ ಪಡೆದಿರುವುದಾಗಿ ವರದಿಯಾಗಿದೆ.
ಲಾಹೋರ್ ಪಾರಂಪರಿಕ ಪುನರುಜ್ಜೀವನ ಪ್ರಾಧಿಕಾರದ (ಎಲ್‍ಎಎಚ್‍ಆರ್) ಪೋಷಕ ಮುಖ್ಯಸ್ಥರಾಗಿ ನವಾಝ್ ಷರೀಫ್ ರನ್ನು ನೇಮಿಸಲಾಗಿದೆ ಎಂದು ಪಂಜಾಬ್ ಸರಕಾರದ ಮುಖ್ಯಮಂತ್ರಿ ಮರಿಯಮ್ ನವಾಝ್ ಅವರ ಕಚೇರಿ ಹೇಳಿಕೆ ನೀಡಿದೆ. ಮೂರು ಬಾರಿ ಪ್ರಧಾನಿಯಾಗಿದ್ದ ನವಾಝ್ ಷರೀಫ್ ಲಾಹೋರ್ ನಲ್ಲಿನ ವಸಾಹತುಶಾಹಿ ಯುಗದ ಕಟ್ಟಡಗಳ ಮರುಸ್ಥಾಪನೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಪಂಜಾಬ್ ಸರಕಾರ ಅಧಿಸೂಚನೆ ಹೊರಡಿಸಿದೆ.
ನಿವೃತ್ತರಾದ ಬಳಿಕ ಸರ್ಕಾರಿ ಉದ್ಯೋಗ ಪಡೆದಿರುವ ನವಾಝ್ ಷರೀಫ್ ಗೆ ಅಭಿನಂದನೆಗಳು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾ ನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ವ್ಯಂಗ್ಯವಾಡಿದೆ.
2024ರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಎದುರಾದ ಅವಮಾನಕಾರಿ ಸೋಲಿನ ಬಳಿಕ ನವಾಝ್ ಷರೀಫ್ ನಿವೃತ್ತ ಜೀವನ ನಡೆಸುತ್ತಿದ್ದರು. ಈಗ ಅವರ ಪುತ್ರಿ, ಪಂಜಾಬ್‍ನ ಮುಖ್ಯಮಂತ್ರಿ ನವಾಝ್‍ಗೆ ಉದ್ಯೋಗ ನೀಡಿದ್ದಾರೆ' ಎಂದು ಪಿಟಿಐ ಹಿರಿಯ ನಾಯಕ ಶೌಕರ್ ಬಸ್ರಾರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.