ಪೆರು ರಾಜಧಾನಿಯಲ್ಲಿ ಹಿಂಸಾಚಾರ: ತುರ್ತು ಪರಿಸ್ಥಿತಿ ಘೋಷಣೆ
Update: 2025-03-19 22:01 IST

ಸಾಂದರ್ಭಿಕ ಚಿತ್ರ | Photo: NDTV
ಲಿಮಾ: ಪೆರುವಿನಲ್ಲಿ ಜನಪ್ರಿಯ ಗಾಯಕನ ಹತ್ಯೆಯನ್ನು ಖಂಡಿಸಿ ರಾಜಧಾನಿ ಲಿಮಾದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಬಳಿಕ ಲಿಮಾದಲ್ಲಿ 30 ದಿನಗಳಾವಧಿಯ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದಾಗಿ ಅಧ್ಯಕ್ಷರು ಘೋಷಿಸಿದ್ದಾರೆ.
ಅರ್ಮೋನಿಯಾ 10 ಎಂಬ ಗಾಯನ ತಂಡದ ಪ್ರಮುಖ ಸದಸ್ಯರಾಗಿದ್ದ ಪೌಲ್ ಫ್ಲೋರ್ಸ್‍ರನ್ನು ರವಿವಾರ ತಂಡವೊಂದು ಹತ್ಯೆ ಮಾಡಿತ್ತು. ಇದನ್ನು ಖಂಡಿಸಿ ರಾಜಧಾನಿಯಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಿಂಸಾಚಾರವನ್ನು ನಿಯಂತ್ರಿಸಲು 30 ದಿನಗಳ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದ್ದು ಸಭೆ ಸೇರುವ ಹಕ್ಕು ಸೇರಿದಂತೆ ಜನರ ಕೆಲವೊಂದು ಹಕ್ಕುಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿದೆ. ಈ ಮಧ್ಯೆ, ಆಂತರಿಕ ಸಚಿವ ಜುವಾನ್ ಜೋಸ್ ವಿರುದ್ಧ ಸಂಸತ್‍ನಲ್ಲಿ ವಿರೋಧ ಪಕ್ಷದ ಸಂಸದರು ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿರುವುದಾಗಿ ವರದಿಯಾಗಿದೆ.