ಅಮೆರಿಕದಲ್ಲಿ ಹಕ್ಕಿಜ್ವರದಿಂದ ಮೊದಲ ಮೃತ್ಯು ; ವರದಿ

Update: 2025-01-07 16:25 GMT

ನ್ಯೂಯಾರ್ಕ್: ಎಚ್5ಎನ್1 ಹಕ್ಕಿಜ್ವರದಿಂದ ಲೂಸಿಯಾನಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ಮೃತಪಟ್ಟಿದ್ದು ಇದು ಅಮೆರಿಕದಲ್ಲಿ ಹಕ್ಕಿಜ್ವರದಿಂದ ಸಂಭವಿಸಿದ ಮೊದಲ ಸಾವಿನ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಯಲ್ಲಿ ಕೋಳಿಗಳನ್ನು ಸಾಕುತ್ತಿದ್ದ 65 ವರ್ಷದ ವ್ಯಕ್ತಿಯಲ್ಲಿ ಎಚ್5ಎನ್1 ಸೋಂಕಿನ ಲಕ್ಷಣ ಪತ್ತೆಯಾದ ಹಿನ್ನೆಲೆಯಲ್ಲಿ ಡಿಸೆಂಬರ್ 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮೆರಿಕದಲ್ಲಿ ಎಪ್ರಿಲ್ ಬಳಿಕ ಸುಮಾರು 70 ಮಂದಿ ಹಕ್ಕಿಜ್ವರಕ್ಕೆ ತುತ್ತಾಗಿದ್ದು ಅವರಲ್ಲಿ ಹೆಚ್ಚಿನವರು ಕೃಷಿ ಕೆಲಸಗಾರರು. ಕೋಳಿ ಫಾರಂ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬಂದಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಹೇಳಿದೆ.

2022ರಲ್ಲಿ ಕೋಳಿಫಾರಂಗಳಲ್ಲಿ ಆರಂಭಗೊಂಡ ಹಕ್ಕಿಜ್ವರವು ಕ್ರಮೇಣ ಉಲ್ಬಣಗೊಂಡಿದ್ದು ಸುಮಾರು 13 ಕೋಟಿಯಷ್ಟು ಕಾಡುಕೋಳಿ ಮತ್ತು ದೇಶೀಯ ಕೋಳಿಗಳನ್ನು ಬಲಿ ಪಡೆದಿದೆ ಎಂದು ಅಮೆರಿಕದ ಕೃಷಿ ಇಲಾಖೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News