ಟಿಬೆಟ್-ನೇಪಾಳ ಗಡಿಯಲ್ಲಿ ಸರಣಿ ಭೂಕಂಪ: ಮೃತರ ಸಂಖ್ಯೆ 53ಕ್ಕೆ ಏರಿಕೆ, 62 ಮಂದಿಗೆ ಗಾಯ
Update: 2025-01-07 08:05 GMT
ಟಿಬೆಟ್ (ಚೀನಾ): ಮಂಗಳವಾರ ಬೆಳಗ್ಗೆ ನೇಪಾಳ ಹಾಗೂ ಪಶ್ಚಿಮ ಚೀನಾ ಗಡಿಯಲ್ಲಿ ಸಂಭವಿಸಿದ 7.1 ತೀವ್ರತೆಯ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆಯಾಗಿದ್ದು, 62 ಮಂದಿ ಗಾಯಗೊಂಡಿದ್ದಾರೆ.
ಈ ಭೂಕಂಪನ ಟಿಬೆಟ್ ಪ್ರಾಂತ್ಯದ 10 ಕಿಮೀ ಆಳದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ಅಮೆರಿಕ ಭೌಗೋಳಿಕ ಸಮೀಕ್ಷೆ ಸಂಸ್ಥೆ ಹೇಳಿದೆ. AP ಸುದ್ದಿ ಸಂಸ್ಥೆಯ ಪ್ರಕಾರ,ಚೀನಾದಲ್ಲಿ 6.8 ತೀವ್ರತೆಯ ಭೂಕಂಪನ ಸಂಭವಿಸಿದೆ.
ಚೀನಾದ ರಾಷ್ಟ್ರೀಯ ಸುದ್ದಿ ಮಾಧ್ಯಮ CCTV ಪ್ರಕಾರ, ಭೂಕಂಪನ ಕೇಂದ್ರದ ಸರಾಸರಿ ಅಕ್ಷಾಂಶ ಸುಮಾರು 4,200 ಮೀಟರ್ ಗಳಷ್ಟಿತ್ತು ಎಂದು ಹೇಳಲಾಗಿದೆ.
ಭೂಕಂಪನ ಕೇಂದ್ರವು ಟಿಬೆಟ್ ರಾಜಧಾನಿ ಲ್ಹಾಸದಿಂದ 380 ಕಿಮೀ ದೂರದಲ್ಲಿ ಕೇಂದ್ರೀಕೃತಗೊಂಡಿದ್ದು, ಭೂಕಂಪನ ಕೇಂದ್ರದ 5 ಕಿಮೀ ವ್ಯಾಪ್ತಿಯೊಳಗೆ ಕೈಬೆರಳೆಣಿಕೆಯಷ್ಟು ಸಮುದಾಯಗಳು ಮಾತ್ರ ವಾಸಿಸುತ್ತಿವೆ ಎನ್ನಲಾಗಿದೆ.