ಪಾಕಿಸ್ತಾನ | ಕುರ್ರಂ ಜಿಲ್ಲೆಯಲ್ಲಿ 2 ತಿಂಗಳು ಸೆಕ್ಷನ್ 144 ಜಾರಿ
Update: 2025-01-06 15:57 GMT
ಪೇಷಾವರ: ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದ ಕುರ್ರಂ ಜಿಲ್ಲೆಯಲ್ಲಿ 2 ತಿಂಗಳು ಸೆಕ್ಷನ್ 144 ಜಾರಿಗೊಳಿಸಿರುವುದಾಗಿ ಪ್ರಾಂತೀಯ ಸರಕಾರ ಘೋಷಿಸಿದೆ.
ಸರಣಿ ಹಿಂಸಾಚಾರದಿಂದ ತತ್ತರಿಸಿರುವ ಕುರ್ರಂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರವಿವಾರ ಖೈಬರ್ ಪಖ್ತೂಂಕ್ವಾ ಮುಖ್ಯಮಂತ್ರಿ ಅಲಿ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು, ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಗುಂಪು ಸೇರುವುದನ್ನು ಹಾಗೂ ಪರಚಿನಾರ್ ಹೆದ್ದಾರಿಯಲ್ಲಿ ರ್ಯಾಲಿ ನಡೆಸುವುದು ಹಾಗೂ ಈ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸುವುದನ್ನು ನಿಷೇಧಿಸಿರುವುದಾಗಿ ವರದಿಯಾಗಿದೆ.