ಪಿಜಿಪಿ ಕಾರ್ಯಕ್ರಮ ಸ್ಥಗಿತಕ್ಕೆ ಕೆನಡಾ ನಿರ್ಧಾರ: ಭಾರತೀಯರಿಗೆ ಸಮಸ್ಯೆ

Update: 2025-01-05 16:32 GMT

Photo : freepik

ಒಟ್ಟಾವ: ಕೆನಡಾದಲ್ಲಿ ನೆಲೆಸಿರುವ ಭಾರತೀಯ ವಲಸಿಗರಿಗೆ ಮತ್ತೊಂದು ಕಳವಳಕಾರಿ ಕ್ರಮವಾಗಿ 2025ರಲ್ಲಿ ಶಾಶ್ವತ ನಿವಾಸಕ್ಕಾಗಿ ಪಾಲಕರು ಮತ್ತು ಅಜ್ಜ-ಅಜ್ಜಿಯರನ್ನು ಪ್ರಾಯೋಜಿಸಲು(ಪಿಜಿಪಿ) ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಕೆನಡಾದ ಫೆಡರಲ್ ಸರಕಾರ ಘೋಷಿಸಿದೆ.

ಪಾಲಕರು ಮತ್ತು ಅಜ್ಜ-ಅಜ್ಜಿಯರ(ಗ್ರ್ಯಾಂಡ್ ಪೇರೆಂಟ್ಸ್) ಕಾರ್ಯಕ್ರಮದಡಿ 2024ರಲ್ಲಿ ಸಲ್ಲಿಸಲಾದ ಕುಟುಂಬ ಪ್ರಾಯೋಜಕತ್ವದ ಅರ್ಜಿಗಳನ್ನು ಮಾತ್ರ 2025ರಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆ ಹೇಳಿದೆ.

ಕೆನಡಾದ ನಾಗರಿಕರು, ಖಾಯಂ ನಿವಾಸಿಗಳು ಮತ್ತು ನೋಂದಾಯಿತ ಭಾರತೀಯರು ತಮ್ಮ ಪಾಲಕರು ಮತ್ತು ಅಜ್ಜ-ಅಜ್ಜಿಯರನ್ನು ಕೆನಡಾಕ್ಕೆ ವಲಸೆ ಹೋಗಲು ಪ್ರಾಯೋಜಿಸಲು ಅನುಮತಿಸುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ಅನುಮೋದಿಸಲಾದ ಪೋಷಕರು ಮತ್ತು ಅಜ್ಜ-ಅಜ್ಜಿಯರು ಕೆನಡಾದ ಶಾಶ್ವತ ನಿವಾಸಿ ಸ್ಥಾನಮಾನ ಪಡೆಯುತ್ತಾರೆ ಮತ್ತು ಅಂತಿಮವಾಗಿ ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

ಪಿಜಿಪಿ ಮೂಲಕ ಪ್ರಾಯೋಜಿತ ಜನರು ಕೆನಡಾದಲ್ಲಿ ಕೆಲಸ ಮಾಡುವ ಅರ್ಹತೆ ಸೇರಿದಂತೆ ಕೆನಡಾದ ಶಾಶ್ವತ ನಿವಾಸ ಸ್ಥಾನಮಾನದ ಸಂಪೂರ್ಣ ಪ್ರಯೋಜನವನ್ನು ಆನಂದಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News