ಸುಡಾನ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ: ಇಬ್ಬರು ಮೃತ್ಯು

Update: 2025-04-01 20:54 IST
ಸುಡಾನ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ: ಇಬ್ಬರು ಮೃತ್ಯು

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಖಾರ್ಟೌಮ್: ಸುಡಾನ್‌ ನ ಉತ್ತರ ದಾರ್ಫುರ್ ರಾಜ್ಯದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು ಇತರ 7 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಬು ಶೌಕ್ ನಿರಾಶ್ರಿತರ ಶಿಬಿರದ ಮೇಲೆ ಅರೆ ಸೇನಾಪಡೆ ಭೀಕರ ಬಾಂಬ್ ದಾಳಿ ನಡೆಸಿದೆ. ಸ್ಫೋಟಕಗಳನ್ನು ಹೊಂದಿರುವ ಡ್ರೋನ್‍ ಗಳು ಎಲ್-ಫಶರ್ ನಗರದ ಮೇಲೆ ಹಾರುತ್ತಿವೆ ಎಂದು ಮೂಲಗಳು ಹೇಳಿವೆ. ಸುಡಾನ್‌ ನಲ್ಲಿ ಅಬ್ದೆಲ್ ಫತಾಹ್ ಅಲ್-ಬರ್ಹಾನ್ ನೇತೃತ್ವದ ಸೇನಾಪಡೆ ಹಾಗೂ ಮುಹಮ್ಮದ್ ಹಮ್ದನ್ ಡಗಾಲೊ ನೇತೃತ್ವದ ಅರೆ ಸೇನಾಪಡೆಯ ನಡುವೆ 2023ರ ಎಪ್ರಿಲ್‍ ನಿಂದ ಸಂಘರ್ಷ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News