ಟ್ರಂಪ್ ಹೇರುವ ಸುಂಕ ಇಂದಿನಿಂದಲೇ ಜಾರಿ: ಶ್ವೇತಭವನ

Update: 2025-04-02 08:57 IST
ಟ್ರಂಪ್ ಹೇರುವ ಸುಂಕ ಇಂದಿನಿಂದಲೇ ಜಾರಿ: ಶ್ವೇತಭವನ

File Photo (AP)

  • whatsapp icon

ವಾಷಿಂಗ್ಟನ್ ಡಿಸಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸುವ ಹೊಸ ಸುಂಕಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ದೃಢಪಡಿಸಿದ್ದಾರೆ.

"ಇವು ತಕ್ಷಣದಿಂದಲೇ ಜಾರಿಗೆ ಬರಲಿವೆ ಹಾಗೂ ಅಧ್ಯಕ್ಷರನ್ನು ಈ ಬಗ್ಗೆ ಕೆಲ ಸಮಯದಿಂದ ಅಣಕಿಸಲಾಗುತ್ತಿದೆ" ಎಂದು ಸುದ್ದಿಗಾರರಿಗೆ ತಿಳಿಸಿದರು.

ಮೊದಲ ಅಧ್ಯಕ್ಷೀಯ ಅವಧಿಗಿಂತ ಸಂಪೂರ್ಣ ಭಿನ್ನ ಪಥ ತುಳಿದಿರುವ ಟ್ರಂಪ್, ಆ ಅವಧಿಯಲ್ಲಿ ಆಮದಿನ ಮೇಲೆ 380 ಶತಕೋಟಿ ಡಾಲರ್ ಸುಂಕವನ್ನು ವಿಧಿಸಿದ್ದರು. ಆದರೆ ಇದೀಗ ಹೆಚ್ಚು ದುಬಾರಿ ದೃಷ್ಟಿಕೋನವನ್ನು ಹೊಂದಿದಂತೆ ಕಾಣಿಸುತ್ತಿದೆ.

"ಎಲ್ಲ ದೇಶಗಳಿಗೂ ಇದು ಆರಂಭವಾಗಲಿದೆ; ಏನಾಗುತ್ತದೆಯೋ ಕಾದು ನೋಡೋಣ" ಎಂದು ಟ್ರಂಪ್ ಭಾನುವಾರ ಹೇಳಿಕೆ ನೀಡಿದ್ದರು.

ಪ್ರಮುಖ ವಿವರಗಳು ಅನಿಶ್ಚಿತವಾಗಿದ್ದು, ಹೂಡಿಕೆದಾರರು ಮತ್ತು ಉದ್ಯಮಿಗಳು ಸರ್ಕಾರದ ನಡೆಯನ್ನು ಕಾತರದಿಂದ ಕಾಯುತ್ತಿದ್ದಾರೆ. ಆರ್ಥಿಕ ಪತನ ಹಾಗೂ ವಿದೇಶಿ ನಾಯಕರ ಒತ್ತಡದ ಕಾರಣದಿಂದ ಸುಂಕದಲ್ಲಿ ಟ್ರಂಪ್ ಹೊಂದಾಣಿಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಯಾವುದೇ ಅಂಜಿಕೆ ಇಲ್ಲದೇ ಟ್ರಂಪ್ ತಮ್ಮ ಯೋಜನೆಯನ್ನು ಜಾರಿಗೊಳಿಸಲಿದ್ದಾರೆ ಎಂಬ ಸುಳಿವು ಶ್ವೇತಭವನದಿಂದ ದೊರಕಿದೆ.

"ಇದು ಚೆನ್ನಾಗಿ ಕಾರ್ಯರೂಪಕ್ಕೆ ಬರಲಿದೆ. ಹಲವು ದಶಕಗಳ ಕಾಲ ಈ ವಿಷಯದ ಬಗ್ಗೆ ಪರಿಣತಿ ಹೊಂದಿರುವ ಅದ್ಭುತ ತಂಡವನ್ನು ಟ್ರಂಪ್ ಸಲಹೆಗಾರರನ್ನಾಗಿ ಹೊಂದಿದ್ದಾರೆ. ಅಮೆರಿಕದ ಸುವರ್ಣಯುಗ ಮತ್ತು ಉತ್ಪಾದನಾ ಕೇಂದ್ರವಾಗಿ ಅಮೆರಿಕ ಮತ್ತೆ ಅಗ್ರಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಗಮನ ಹರಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಕರೋಲಿನಾ ಹೇಳಿದರು. ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 4 ಗಂಟೆಗೆ ರೋಸ್ಗಾರ್ಡನ್ ಸಮಾರಂಭದಲ್ಲಿ ಟ್ರಂಪ್ ಹೊಸ ನೀತಿಯನ್ನು ಪ್ರಕಟಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News