ಇಸ್ರೇಲ್ ಸೇನೆಗೆ ಎಐ ತಂತ್ರಜ್ಞಾನ ಪೂರೈಕೆಗೆ ವಿರೋಧ; ಮೈಕ್ರೋಸಾಫ್ಟ್ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಫೆಲೆಸ್ತೀನ್ ಪರ ಘೋಷಣೆ ಕೂಗಿದ ಉದ್ಯೋಗಿಗಳು

Update: 2025-04-05 21:44 IST
ಇಸ್ರೇಲ್ ಸೇನೆಗೆ ಎಐ ತಂತ್ರಜ್ಞಾನ ಪೂರೈಕೆಗೆ ವಿರೋಧ; ಮೈಕ್ರೋಸಾಫ್ಟ್ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಫೆಲೆಸ್ತೀನ್ ಪರ ಘೋಷಣೆ ಕೂಗಿದ ಉದ್ಯೋಗಿಗಳು

PC : NDTV 

  • whatsapp icon

ನ್ಯೂಯಾರ್ಕ್: ವಿಶ್ವ ವಿಖ್ಯಾತ ಕಂಪ್ಯೂಟರ್ ಸಾಫ್ಟ್‌ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ನ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಕಂಪೆನಿಯ ಉದ್ಯೋಗಿಗಳ ಗುಂಪೊಂದು ಫೆಲೆಸ್ತೀನ್ ಪರ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ.

ಇಸ್ರೇಲ್ ಸೇನೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ)ವನ್ನು ಮೈಕ್ರೋಸಾಫ್ಟ್‌ನ ಪೂರೈಕೆ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿದೆ.

ಮೈಕ್ರೋಸಾಫ್ಟ್‌ ನ ಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಸ್ತಾಫಾ ಸುಲೇಮಾನ್ ಅವರು ಎಐ ಉತ್ಪನ್ನದ ತಾಜಾ ವಿವರಗಳನ್ನು ಹಾಗೂ ಕಂಪೆನಿಯ ‘ಎಐ ಅಸಿಸ್ಟಾಂಟ್’ ಮಾದರಿ ಬಗ್ಗೆ ಸಂಸ್ಥೆ ಹೊಂದಿರುವ ದೀರ್ಘಾವಧಿಯ ದೃಷ್ಟಿಕೋನದ ಬಗ್ಗೆ ಮಾತನಾಡುತ್ತಿದ್ದಾಗ ಪ್ರತಿಭಟನೆ ಆರಂಭಗೊಂಡಿತ್ತು.

ಮೈಕ್ರೋಸಾಫ್ಟ್‌ ನ ಸಹಸಂಸ್ಥಾಪಕ ಬಿಲ್‌ಗೇಟ್ಸ್ ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್ ಬಾಲ್ಮೆರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಸ್ತಾಫಾ ಸುಲೇಮಾನ್ ಭಾಷಣ ಮಾಡುತ್ತಿದ್ದಾಗ ಮೈಕ್ರೋಸಾಫ್ಟ್‌ ನ ಮಹಿಳಾ ಉದ್ಯೋಗಿ ಇಬ್ತಿಹಾಲ್ ಅಬುಸ್ಸಾದ್ ಎಂಬವರು, ವೇದಿಕೆಯೆಡೆಗೆ ಸಾಗಿ, ‘‘ಮುಸ್ತಾಫಾ ನಿಮಗೆ ನಾಚಿಕೆಯಾಗಬೇಕು ’’ ಎಂದು ಘೋಷಣೆ ಕೂಗಿ, ಭಾಷಣಕ್ಕೆ ಅಡ್ಡಿಪಡಿಸಿದರು.

‘‘ಕೃತಕ ಬುದ್ಧಿಮತ್ತೆಯನ್ನು ಮಾನವಕುಲದ ಒಳಿತಿಗೆ ಬಳಸಲಾಗುವುದು ಎಂದು ನೀವು ಹೇಳುತ್ತಿದ್ದೀರಿ. ಆದರೆ ಮೈಕ್ರೋಸಾಫ್ಟ್ ಎಐ ಶಸ್ತ್ರಾಸ್ತ್ರಗಳನ್ನ ಇಸ್ರೇಲ್ ಸೇನೆಗೆ ಮಾರಾಟ ಮಾಡುತ್ತಿದೆ. ನಮ್ಮ ಪ್ರಾಂತ ದಲ್ಲಿ (ಗಾಝಾ) 50 ಸಾವಿರಕ್ಕೂ ಅಧಿಕ ಜನರನ್ನು ಹತ್ಯೆಗೈಯಲಾಗಿದೆ. ಈ ನರಮೇಧಕ್ಕೆ ಎಐ ಶಕ್ತಿ ತುಂಬುತ್ತಿದೆ ಎಂದವರು ಆಪಾದಿಸಿದರು.

ಅಗ ಉತ್ತರಿಸಿದ ‘‘ಸುಲೇಮಾನ್ ನಿಮ್ಮ ಪ್ರತಿಭಟನೆಗೆ ಧನ್ಯವಾದಗಳು, ನಿಮ್ಮ ಬೇಡಿಕೆಯನ್ನು ನಾನು ಆಲಿಸುತ್ತಿದ್ದೇನೆ’’ ಎಂದು ಹೇಳಿದರು. ಈ ಸಂದರ್ಭ ಇಬ್ತಿಹಾಲ್ ಅವರು ಫೆಲೆಸ್ತೀಯನ್ ಹೋರಾಟಕ್ಕೆ ಬೆಂಬಲದ ಸಂಕೇತವಾದ ಕೆಫಿಯಾ ಸ್ಕಾರ್ಫ್ ಅನ್ನು ವೇದಿಕೆಯೆಡೆಗೆ ಎಸೆದರು. ಆನಂತರ ಅವರನ್ನು ಭದ್ರತಾ ಸಿಬಂದಿ ಹೊರಗೆ ಕೊಂಡೊಯ್ದರು.

ಗಾಝಾ ಹಾಗೂ ಲೆಬನಾನ್‌ ನಲ್ಲಿ ಇಸ್ರೇಲ್ ಸೇನೆ ಬಾಂಬ್ ದಾಳಿಗಳನ್ನು ನಡೆಸಲು ಮೈಕೋಸಾಫ್ಟ್‌ ನ ಎಐ ಮಾದರಿಗಳು ಹಾಗೂ ಓಪನ್ ಎಐ ತಂತ್ರಜ್ಞಾನವನ್ನು ಬಳಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News