ಅಮೆರಿಕ: ಭಾರತೀಯ ಮೂಲದ ಕ್ಯಾಥೊಲಿಕ್ ಪಾದ್ರಿಯ ಗುಂಡಿಕ್ಕಿ ಹತ್ಯೆ

Update: 2025-04-04 21:26 IST
Fr. Arul Carasala

ಅರುಲ್ ಕ್ಯರಸಲ | PC : X \ @FlanaganOnFaith

  • whatsapp icon

ನ್ಯೂಯಾರ್ಕ್: ಅಮೆರಿಕದ ಕನ್ಸಾಸ್ ರಾಜ್ಯದ ಚರ್ಚ್‍ನ ಆವರಣದಲ್ಲಿ ಭಾರತೀಯ ಮೂಲದ ಕ್ಯಾಥೊಲಿಕ್ ಪಾದ್ರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ಮೃತರನ್ನು ಫಾದರ್ ಅರುಲ್ ಕ್ಯರಸಲ ಎಂದು ಗುರುತಿಸಲಾಗಿದ್ದು ಅವರ ಕುಟುಂಬ ಆಂಧ್ರಪದೇಶದ ಕಡಪ ನಗರದಲ್ಲಿ ವಾಸಿಸುತ್ತಿದೆ. ಸೆನೆಕಾ ನಗರದಲ್ಲಿನ ಚರ್ಚ್‍ನ ಆವರಣದಲ್ಲಿರುವ ತಮ್ಮ ನಿವಾಸದಲ್ಲಿದ್ದ ಪಾದ್ರಿಯ ಬಳಿ ಬಂದ ವ್ಯಕ್ತಿಯೊಬ್ಬ ಅವರ ಮೇಲೆ ಹತ್ತಿರದಿಂದ ಗುಂಡು ಹಾರಿಸಿದ್ದಾನೆ.

ಶಂಕಿತ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News