ಟ್ರಂಪ್ ಹತ್ಯೆಗೆ ಹಣ ಕ್ರೋಢೀಕರಿಸಲು ಪೋಷಕರನ್ನೇ ಹತ್ಯೆ ಮಾಡಿದ ಯುವಕ!

Update: 2025-04-14 07:49 IST
ಟ್ರಂಪ್ ಹತ್ಯೆಗೆ ಹಣ ಕ್ರೋಢೀಕರಿಸಲು ಪೋಷಕರನ್ನೇ ಹತ್ಯೆ ಮಾಡಿದ ಯುವಕ!
PC : NDTV 
  • whatsapp icon

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಕ್ರಾಂತಿಯ ಕಿಡಿ ಹಾರಿಸುವ ತನ್ನ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಹಣ ಕ್ರೋಢೀಕರಿಸಲು ಮತ್ತು ಅಗತ್ಯ ಸ್ವಾತಂತ್ರ್ಯ ಪಡೆಯಲು 17 ವರ್ಷದ ಯುವಕ ತನ್ನ ಪೋಷಕರನ್ನೇ ಹತ್ಯ ಮಾಡಿದ ಪ್ರಕರಣ ವಿಸ್ಕನ್ಸಿನ್‍ನಲ್ಲಿ ಘಟಿಸಿದೆ.

ಈ ಆಘಾತಕಾರಿ ಘಟನೆಯನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಬಹಿಂಗಪಡಿಸಿದ್ದಾರೆ. ತತಿಯಾನಾ ಕಸಪ್ (35) ಮತ್ತು ಮಲತಂದೆ ಡೊನಾಲ್ಡ್ ಮೇಯರ್ (51) ಎಂಬುವವರನ್ನು ಗುಂಡಿಕ್ಕಿ ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳೆದ ಮಾರ್ಚ್‍ನಲ್ಲಿ ನಿಕಿಟಾ ಕಸಪ್ ಎಂಬ ಯುವಕನನ್ನು ವೂಕೇಶಾದಲ್ಲಿರುವ ಅವರ ಮನೆಯಿಂದ ಬಂಧಿಸಿದ್ದರು.

ಫೆಬ್ರುವರಿ 11ರಂದು ಈ ಹತ್ಯೆ ನಡೆದಿದೆ ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ. ಯುವಕ ಅಡುಗೆಮನೆಯ ಬಳಿ ಹೊದಿಕೆಗಳರಾಶಿಯಲ್ಲಿ ಮೃತದೇಹಗಳನ್ನು ಹುದುಗಿಸಿ ಇಟ್ಟಿದ್ದ ಎಂದು ಸಿಎನ್‍ಎನ್ ವರದಿ ಮಾಡಿದೆ.

ಟ್ರಂಪ್ ಅವರನ್ನು ಹತ್ಯೆ ಮಾಡಿ ಅಮೆರಿಕ ಸರ್ಕಾರವನ್ನು ಕಿತ್ತೊಗೆಯುವ ತನ್ನ ವಿಸ್ತøತ ಕಾರ್ಯಯೋಜನೆಗೆ ಹಣ ಮತ್ತು ಸ್ವಾತಂತ್ರ್ಯವನ್ನು ಪಡೆಯುವ ಸಲುವಾಗಿ ಯುವಕ ಈ ಹತ್ಯೆ ಮಾಡಿದ್ದಾಗಿ ಎಫ್‍ಬಿಐ ಅಫಿಡವಿಟ್‍ನಲ್ಲಿ ವಿವರಿಸಲಾಗಿದೆ. ರಾಜಕೀಯ ಮುಖಂಡರನ್ನು ಹತ್ಯೆ ಮಾಡಿ ಅರಾಜಕತೆ ಸೃಷ್ಟಿಸುವ ಯೋಜನೆ, ಯುವಕನ ಬಳಿ ಪತ್ತೆಯಾದ ಮೂರು ಪುಟಗಳ ದಾಖಲೆಯಿಂದ ಪತ್ತೆಯಾಗಿದೆ. "ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹತ್ಯೆ ಮಾಡುವುದರಿಂದ ಅರಾಜಕತೆ ಸೃಷ್ಟಿಯಾಗುವುದು ಖಚಿತ" ಎಂದು ಯುವಕ ಬರೆದಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News