ಎಲ್ಲಾ ದೇಶಗಳ ಮೇಲೆ ಸುಂಕ ವಿಧಿಸುತ್ತೇವೆ: ಡೊನಾಲ್ಡ್ ಟ್ರಂಪ್

Update: 2025-04-01 20:56 IST
ಎಲ್ಲಾ ದೇಶಗಳ ಮೇಲೆ ಸುಂಕ ವಿಧಿಸುತ್ತೇವೆ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | PC : PTI 

  • whatsapp icon

ವಾಷಿಂಗ್ಟನ್: ಅಮೆರಿಕವು ಎಲ್ಲಾ ದೇಶಗಳ ಮೇಲೆ ಸುಂಕವನ್ನು ವಿಧಿಸುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಸುಂಕವನ್ನು ಸಾರ್ವತ್ರಿಕವಾಗಿ ವಿಧಿಸಲಾಗುವುದು. ನಾವು ಎಲ್ಲಾ ದೇಶಗಳೊಂದಿಗೆ ಪ್ರಾರಂಭಿಸುತ್ತೇವೆ. ಅದರಿಂದ ಏನಾಗುತ್ತದೆ ನೋಡೋಣ' ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಹಿಂದೆ, ಆಯ್ದ ಕೆಲವು ದೇಶಗಳ ವಿರುದ್ಧ ಮಾತ್ರ ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿದ್ದರು. ವ್ಯಾಪಾರ ಅಸಮತೋಲನವನ್ನು ಹೊಂದಿರುವ ದೇಶಗಳನ್ನು ಅಥವಾ ಅಮೆರಿಕನ್ ಸರಕುಗಳ ಮೇಲೆ ಸುಂಕವನ್ನು ಹೇರುವ ದೇಶಗಳನ್ನು ಗುರಿಯಾಗಿಟ್ಟುಕೊಂಡು ಪರಸ್ಪರ ಸುಂಕಗಳನ್ನು ಪರಿಗಣಿಸುವುದಾಗಿ ಟ್ರಂಪ್ ಸರಕಾರ ಈ ಹಿಂದೆ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News