ಗಾಝಾ ನಗರದ ಪೂರ್ವದಲ್ಲಿ ಇಸ್ರೇಲ್ ಸೇನೆಯಿಂದ ಹೊಸ ಭೂ ಕಾರ್ಯಾಚರಣೆ

Update: 2025-04-04 21:12 IST
Gaza

PC : aljazeera.com

  • whatsapp icon

ಜೆರುಸಲೇಂ: ಫೆಲೆಸ್ತೀನಿಯನ್ ಪ್ರದೇಶದೊಳಗೆ ಸ್ಥಾಪಿಸಿದ ಭದ್ರತಾ ವಲಯವನ್ನು ವಿಸ್ತರಿಸಲು ಶುಕ್ರವಾರ ಗಾಝಾ ನಗರದ ಪೂರ್ವಕ್ಕೆ ಹೊಸ ಭೂ ಕಾರ್ಯಾಚರಣೆ ಆರಂಭಿಸಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದೆ.

ಭದ್ರತಾ ವಲಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗಿನಿಂದ ಉತ್ತರ ಗಾಝಾದ ಶೆಜೈಯಾ ಪ್ರದೇಶದಲ್ಲಿ ಸೇನೆಯು ಭೂ ಕಾರ್ಯಾಚರಣೆ ಆರಂಭಿಸಿದೆ. ಹಲವಾರು ಭಯೋತ್ಪಾದಕರನ್ನು ನಿವಾರಿಸಲಾಗಿದ್ದು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ಸಹಿತ ಹಮಾಸ್‍ನ ಹಲವು ಮೂಲಸೌಕರ್ಯಗಳನ್ನು ಕಿತ್ತುಹಾಕಿದೆ. ಕಾರ್ಯಾಚರಣೆಯ ಸಂದರ್ಭ ಮತ್ತು ಅದಕ್ಕೂ ಮುನ್ನ ಸೈನ್ಯವು ಸಂಘಟಿತ ಮಾರ್ಗಗಳ ಮೂಲಕ ನಾಗರಿಕರು ಸ್ಥಳಾಂತರಗೊಳ್ಳಲು ಅವಕಾಶ ಮಾಡಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಈ ಮಧ್ಯೆ, ದಕ್ಷಿಣ ಗಾಝಾ ಪಟ್ಟಿಯ ರಫಾ ನಗರವನ್ನು ವಶಪಡಿಸಿಕೊಂಡಿದ್ದು ಸಾವಿರಾರು ನಿವಾಸಿಗಳು ಸುರಕ್ಷಿತ ಪ್ರದೇಶದತ್ತ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಗಾಝಾ ಯುದ್ಧದ ಸಂದರ್ಭ ನೆಲೆ ಕಳೆದುಕೊಂಡಿದ್ದ ಫೆಲೆಸ್ತೀನೀಯರಿಗೆ ಕೊನೆಯ ಸುರಕ್ಷಿತ ತಾಣವಾಗಿ ಗುರುತಿಸಿಕೊಂಡಿದ್ದ ರಫಾ ನಗರದಲ್ಲಿ ಇಸ್ರೇಲ್ ಸೇನೆ ಭೂಕಾರ್ಯಾಚರಣೆ ತೀವ್ರಗೊಳಿಸುತ್ತಿದ್ದು ಹಲವು ಮನೆಗಳನ್ನು ನೆಲಸಮಗೊಳಿಸಿದೆ. ಗಾಝಾ ನಗರದ ಹೊರವಲಯದಲ್ಲಿರುವ ತುಫಾಹ್ ನಗರದಲ್ಲಿ ಶಾಲೆಯ ಕಟ್ಟಡಕ್ಕೆ ಮೂರು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಗಾಝಾದ ಆರೋಗ್ಯ ಇಲಾಖೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News