ಟ್ರಂಪ್ ಸುಂಕದ ಬಳಿಕ ಕೋಟ್ಯಾಧೀಶರಿಗೆ 208 ಶತಕೋಟಿ ಡಾಲರ್ ನಷ್ಟ
Update: 2025-04-04 21:09 IST

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಸುಂಕ ಘೋಷಿಸಿದ ಬಳಿಕ ಒಂದು ದಶಕದಲ್ಲೇ ಅದೃಷ್ಟದ ಅತೀ ದೊಡ್ಡ ಕುಸಿತದಲ್ಲಿ, ವಿಶ್ವದ 500 ಶ್ರೀಮಂತ ಜನರ ಸಂಪತ್ತಿನಲ್ಲಿ 208 ಶತಕೋಟಿ ಡಾಲರ್ ಕಡಿಮೆಯಾಗಿದೆ ಎಂದು ಬ್ಲೂಮ್‍ಬರ್ಗ್ ಕೋಟ್ಯಾಧಿಪತಿಗಳ ಸೂಚ್ಯಂಕದ ವರದಿ ಹೇಳಿದೆ.
ಅತೀ ಹೆಚ್ಚಿನ ಆಘಾತ ತಟ್ಟಿದ್ದು ಫೇಸ್‍ಬುಕ್ ಮತ್ತು ಮೆಟಾದ ಸ್ಥಾಪಕ ಮಾರ್ಕ್ ಝಕರ್‍ಬರ್ಗ್‍ಗೆ. ಅವರ ಸಂಪತ್ತಿನಲ್ಲಿ 9% ಕುಸಿತವಾಗಿದ್ದು ಒಟ್ಟು ಸಂಪತ್ತಿನಲ್ಲಿ 17.9 ಶತಕೋಟಿ ಡಾಲರ್ ಕಡಿಮೆಯಾಗಿದೆ. ಅಮಝಾನ್ ಮುಖ್ಯಸ್ಥ ಜೆಫ್ ಬರೋಝ್ ಅವರ ಸಂಪತ್ತಿನಲ್ಲಿ 15.9 ಶತಕೋಟಿ ಡಾಲರ್ ನಷ್ಟು, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸಂಪತ್ತಿನಲ್ಲಿ 11 ಶತಕೋಟಿ ಡಾಲರ್ ಕುಸಿತ ಸಂಭವಿಸಿದೆ. ಎಲ್‍ವಿಎಂಎಚ್ ಸಂಸ್ಥೆಯ ಸಿಇಒ ಫ್ರಾನ್ಸ್‍ನ ಬೆರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತಿನಲ್ಲಿ 6 ಶತಕೋಟಿ ಡಾಲರ್ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.