ಮಲೇಶ್ಯಾ ಗ್ಯಾಸ್ ಪೈಪ್‍ಲೈನ್ ಸೋರಿಕೆ: 100ಕ್ಕೂ ಅಧಿಕ ಮಂದಿಗೆ ಗಾಯ

Update: 2025-04-01 21:07 IST
ಮಲೇಶ್ಯಾ ಗ್ಯಾಸ್ ಪೈಪ್‍ಲೈನ್ ಸೋರಿಕೆ: 100ಕ್ಕೂ ಅಧಿಕ ಮಂದಿಗೆ ಗಾಯ

PC | ANI

  • whatsapp icon

ಕೌಲಲಾಂಪುರ: ಮಲೇಶ್ಯಾದ ರಾಜಧಾನಿ ಬಳಿ ಗ್ಯಾಸ್ ಪೈಪ್‍ಲೈನ್ ಸೋರಿಕೆಯ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ಕೌಲಲಾಂಪುರ ಬಳಿಯ ಸೆಲಾಂಗೊರ್ ರಾಜ್ಯದಲ್ಲಿ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಗ್ಯಾಸ್ ಪೈಪ್‍ಲೈನ್‌ ನಲ್ಲಿ ಸೋರಿಕೆಯಾಗುತ್ತಿರುವುದು ಪತ್ತೆಯಾದೊಡನೆ ಪೈಪ್‍ಲೈನ್‌ ನ ವಾಲ್ವ್ ಮುಚ್ಚಿ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಗಂಭೀರ ಗಾಯಗೊಂಡ 60 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಸೋರಿಕೆಯ ಬಳಿಕ ಕಾಣಿಸಿಕೊಂಡ ಬೆಂಕಿಯಿಂದ ಸುಮಾರು 50 ಮನೆಗಳಿಗೆ ಹಾಗೂ ಹಲವು ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News