ಪೂರ್ವ ಉಕ್ರೇನ್ ನ ಪ್ರಮುಖ ಪಟ್ಟಣ ರಶ್ಯದ ವಶಕ್ಕೆ

Update: 2025-01-06 15:55 GMT

ಸಾಂದರ್ಭಿಕ ಚಿತ್ರ | PC : PTI

ಮಾಸ್ಕೋ: ಪೂರ್ವ ಉಕ್ರೇನ್ ನಲ್ಲಿನ ಕುರಖೋವ್ ಪಟ್ಟಣವನ್ನು ತನ್ನ ಪಡೆಗಳು ವಶಕ್ಕೆ ಪಡೆದಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಸೋಮವಾರ ಹೇಳಿದೆ.

ಪೂರ್ವ ಉಕ್ರೇನ್ ನ ಡೊನ್ಬಾಸ್ ಪ್ರಾಂತದ ಬಳಿಯಿರುವ, ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಕುರಖೋವ್ ನಗರವನ್ನು ರಶ್ಯದ ಪಡೆಗಳು ಸಂಪೂರ್ಣವಾಗಿ ವಿಮೋಚನೆಗೊಳಿಸಿವೆ. ಈ ನಗರವನ್ನು ಉಕ್ರೇನ್ ಪಡೆಗಳು ಭೂಗತ ಸಂವಹನ ವ್ಯವಸ್ಥೆ ಮತ್ತು ಮುಂಚೂಣಿ ದಾಳಿಯ ನೆಲೆಯನ್ನು ಹೊಂದಿರುವ ಪ್ರಬಲ ಕೋಟೆಯನ್ನಾಗಿ ಪರಿವರ್ತಿಸಿದ್ದವು. ಅತ್ಯಂತ ಆಯಕಟ್ಟಿನ ಈ ನಗರವನ್ನು ವಶಕ್ಕೆ ಪಡೆದುಕೊಂಡಿರುವುದು ಡೊನೆಟ್ಸ್ಕ್ ಪ್ರಾಂತದ ಉಳಿದ ಭಾಗವನ್ನು ವಶಪಡಿಸಿಕೊಳ್ಳಲು ರಶ್ಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿಕೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಪೂರ್ವ ಉಕ್ರೇನ್ನಾದ್ಯಂತ ರಶ್ಯದ ಪಡೆಗಳು ತೀವ್ರಗತಿಯಲ್ಲಿ ಮುನ್ನಡೆ ಸಾಧಿಸುತ್ತಿವೆ.

ಕುರಖೋವ್ ಪಟ್ಟಣದ ಗ್ರಾಮೀಣ ಭಾಗದಲ್ಲಿ ರಶ್ಯ ದಾಳಿ ಕಾರ್ಯಾಚರಣೆ ನಡೆಸುತ್ತಿದೆ. ನಮ್ಮ ಯುದ್ಧವಲಯದ ಒಳಗೆ ನುಗ್ಗಿರುವ ಶತ್ರುಗಳನ್ನು ನಾಶಗೊಳಿಸಲು ನಮ್ಮ ಪಡೆ ಶಕ್ತವಾಗಿದ್ದು ಕುರಖೋವ್ ಸೆಕ್ಟರ್ನಲ್ಲಿ 27 ದಾಳಿಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News