ಜೆಫ್ ಬೆಝೋಸ್ ವ್ಯಂಗ್ಯಚಿತ್ರ ತಿರಸ್ಕರಿಸಿದ್ದಕ್ಕೆ `ವಾಷಿಂಗ್ಟನ್ ಪೋಸ್ಟ್' ಕಾರ್ಟೂನಿಸ್ಟ್ ರಾಜೀನಾಮೆ

Update: 2025-01-05 16:26 GMT

 ಜೆಫ್ ಬೆಝೋಸ್ | PC : PTI 

ವಾಷಿಂಗ್ಟನ್ : ಆನ್‍ಲೈನ್ ಮಾರಾಟ ವೇದಿಕೆ ಅಮಝಾನ್‍ನ ಸ್ಥಾಪಕ ಜೆಫ್ ಬೆಝೋಸ್ ಕುರಿತ ವ್ಯಂಗ್ಯಚಿತ್ರವನ್ನು ಸುದ್ದಿಸಂಪಾದಕರು ತಿರಸ್ಕರಿಸಿರುವುದನ್ನು ವಿರೋಧಿಸಿ `ವಾಷಿಂಗ್ಟನ್ ಪೋಸ್ಟ್'ನ ಕಾರ್ಟೂನಿಸ್ಟ್ ಆ್ಯನ್ ಟೆಲ್ನೇಸ್ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

ಇತರ ಕಾರ್ಪೋರೇಟ್ ನಾಯಕರ ಜತೆಗೆ ಬೆಝೋಸ್ ಟ್ರಂಪ್ ಅವರ ಮಾರ್ ಎ ಲಾಗೊ ಎಸ್ಟೇಟ್‍ಗೆ ನೀಡಿ ಮಾತುಕತೆ ನಡೆಸಿದ ವರದಿಯಿಂದ ಸ್ಫೂರ್ತಿ ಪಡೆದ ವ್ಯಂಗ್ಯಚಿತ್ರವಿದು. ಜೆಫ್ ಬೆರೋಝ್ ಹಾಗೂ ಇತರ ಉದ್ಯಮಿಗಳು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಹೋಲುವ ಪ್ರತಿಮೆಯ ಎದುರು ಮಂಡಿಯೂರಿರುವುದನ್ನು ಕಾರ್ಟೂನ್‍ನಲ್ಲಿ ಚಿತ್ರಿಸಲಾಗಿದೆ.

ಬೆಝೋಸ್, `ಮೆಟಾ(ಫೇಸ್‍ಬುಕ್)ನ ಮಾರ್ಕ್ ಝುಕರ್‍ಬರ್ಗ್, `ಲಾಸ್ ಏಂಜಲೀಸ್ ಟೈಮ್ಸ್'ನ ಮಾಲಕ ಪ್ಯಾಟ್ರಿಕ್ ಸೂನ್-ಶಿಯೋಂಗ್ ಚುನಾಯಿತ ಅಧ್ಯಕ್ಷ ಟ್ರಂಪ್ ಅವರ ಒಲವು ಗಳಿಸಿಕೊಳ್ಳಲು ಪ್ರಯತ್ನಿಸುವ ವಿಷಯವನ್ನು ಈ ವ್ಯಂಗ್ಯಚಿತ್ರ ಹೊಂದಿದೆ ಎನ್ನಲಾಗಿದೆ.

ಪುಲಿಟ್ಝರ್ ಪ್ರಶಸ್ತಿ ವಿಜೇತೆ ಆ್ಯನ್ ಟೆಲ್ನೇಸ್ 2008ರಿಂದಲೂ `ವಾಷಿಂಗ್ಟನ್ ಪೋಸ್ಟ್'ನಲ್ಲಿ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.  

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News