300 ವಲಸಿಗರಿದ್ದ ದೋಣಿಗಳನ್ನು ವಾಪಾಸು ಕಳುಹಿಸಿದ ಮಲೇಶ್ಯಾ

Update: 2025-01-05 15:40 GMT

ಸಾಂದರ್ಭಿಕ ಚಿತ್ರ | PC : PTI

ಕೌಲಲಾಂಪುರ: ಮಲೇಶ್ಯಾದ ಕಡಲ ತೀರದಲ್ಲಿ ಎರಡು ದೋಣಿಗಳಲ್ಲಿದ್ದ ಮ್ಯಾನ್ಮಾರ್ ನ ಸುಮಾರು 300 ಅಕ್ರಮ ವಲಸಿಗರನ್ನು ಅಧಿಕಾರಿಗಳು ವಾಪಾಸು ಕಳುಹಿಸಿರುವುದಾಗಿ ವರದಿಯಾಗಿದೆ.

ಉತ್ತರ ಮಲೇಶ್ಯಾದ ಲಂಕಾವಿ ದ್ವೀಪ ಸಮೂಹದ ನೈಋತ್ಯ ಕಡಲತೀರದ ಬಳಿ ಸಮುದ್ರದಲ್ಲಿ ಸುಮಾರು 2 ನಾಟಿಕಲ್ ಮೈಲು ದೂರದಲ್ಲಿ ಪತ್ತೆಯಾದ ಎರಡು ದೋಣಿಗಳಲ್ಲಿ ಸುಮಾರು 300 ಮ್ಯಾನ್ಮಾರ್ ವಲಸಿಗರು ಅನ್ನ, ನೀರು ಸಿಗದೆ ಅಸಹಾಯಕ ಸ್ಥಿತಿಯಲ್ಲಿದ್ದರು. ಅವರಿಗೆ ಆಹಾರ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸಿ ಅವರನ್ನು ದೇಶದ ಸಮುದ್ರ ವ್ಯಾಪ್ತಿಯಿಂದ ಹೊರಗೆ ಕಳುಹಿಸಲಾಗಿದೆ. ಈ ದೋಣಿಗಳ ಚಲನವಲನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನೆರೆಯ ಥಾಯ್ಲಂಡ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಮಲೇಶ್ಯಾದ ಕಡಲ ವ್ಯಾಪ್ತಿ ಮೇಲುಸ್ತುವಾರಿ ಏಜೆನ್ಸಿಯ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ಲಂಕಾವಿ ದ್ವೀಪದ ತೀರದಲ್ಲಿ ಕಂಡುಬಂದಿದ್ದ ಸುಮಾರು 200 ರೊಹಿಂಗ್ಯಾ ವಲಸಿಗರನ್ನು ಮಲೇಶ್ಯಾ ಪೊಲೀಸರು ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News